ಅಮೆರಿಕನ್ನಡ
Amerikannada
ಜಯಂತಿ ಅಮೃತೇಶ್
ಶ್ರೀಮತಿ ಲಲಿಲತಮ್ಮ ಮತ್ತು ಶ್ರೀ ವೆಂಕಟನಾಥನ್ ಅವರ ಪುತ್ರಿ ಶ್ರೀಮತಿ ಜಯಂತಿ ಅಮೃತೇಶ್ ಜನಿಸಿದ್ದು ಮೈಸೂರಿನಲ್ಲಿ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ಪ್ರಾಥಮಿಕ ಶಿಕ್ಷಣ, ಅನಂತರ ಮೈಸೂರಿನ ಮಹಾರಾಣಿಕಾಲೇಜಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ವ್ಯಾಸಂಗ; ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ, ತಮಿಳು ಮನೆಮಾತು, ತೆಲುಗು ಕಲಿತ ಭಾಷೆ, ಹಿಂದಿಯಲ್ಲಿ ‘ವಿಶಾರದ’ರು, ೨೮ ವರ್ಷಕಾಲ ಮುಂಬಯಿಯ ವಾಸದಲ್ಲಿ ಮರಾಠಿಯ ಒಡನಾಟ- ಹೀಗೆ ಬಹು ಭಾಷಾ ಪರಿಣತಿ.
ಇವರ ಲೇಖನಗಳು ಪುಸ್ತಕಪ್ರಪಂಚ, ಸುಧಾ, ಕಸ್ತೂರಿ, ತರಂಗ, ಮಯೂರ, ಹೊಸತು, ಸವಿಗನ್ನಡ- ಮುಂತಾದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಖ್ಯಾತ ಛಾಯಾಚಿತ್ರಗಾರ ಟಿ ಏಸ್ ಸತ್ಯನ್ ಅವರ ಇಂಗ್ಲಿಷ್ ಬರಹಗಳನ್ನು ಕನ್ನಡಿಸಿದ್ದಾರೆ.