ಅಮೆರಿಕನ್ನಡ
Amerikannada
ಭವಾನಿ ಲೋಕೇಶ್
ಭವಾನಿಲೋಕೇಶ್ ಮಂಡ್ಯದ ಭರವಸೆಯ ಲೇಖಕಿ, ಕವಯಿತ್ರಿ, ಅಂಕಣಕಾರ್ತಿ. ಸಂಗೀತ, ಸಾಹಿತ್ಯ, ಸಂಸ್ಕೃತಿಯ ಆರಾಧಕರು. ಭವಾನಿಲೋಕೇಶ್ ‘ಕನ್ನಡ’ ಮತ್ತು ‘ಮನಃಶಾಸ್ತ್ರ” ಎರಡು ಮಹತ್ವದ ವಿಷಯಗಳಲ್ಲೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯರ್ವಹಿಸುತ್ತಿದ್ದಾರೆ. ಅತ್ಯತ್ತಮ ಕಾರ್ಯಕ್ರಮ ನಿರೂಪಕರಾದ ಇವರ ವಿಶಾಲವಾದ ಓದಿನ ಹರವು, ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಅದಕ್ಕೆ ಸ್ಪಂದಿಸುವ ಸಂವೇದನಾ ಶೀಲತೆ, ಸಾಹಿತ್ಯದ ಒಲವು ಅವರ ವಿಶೇಷತೆ. ಮಂಡ್ಯದ ಪ್ರತಿಷ್ಟಿತ ವಾರಪತ್ರಿಕೆ “ಕೊಳಲು” ಇದರ ಅಂಕಣಕಾರ್ತಿ. ಭಾವಯಾನ, ಬದುಕು ಭಾವದ ಕಡಲು ಕರ್ನಾಟಕ ಗೆಜೆಟ್ ಇವರ ಪ್ರಕಟಿತ ಕೃತಿಗಳು. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ಭಾವಬಿಂಬ ಭಾವಲಹರಿ ಅಚ್ಚಿನಲ್ಲಿರುವ ಕೃತಿಗಳು.