ಅಮೆರಿಕನ್ನಡ
Amerikannada
ನಳಿನಿ ಮೈಯ್ಯ
ಶ್ರೀಮತಿ ನಳಿನಿ ಮೈಯ ಅವರು ತಮ್ಮ ಪತಿ ಸುಬ್ರಾಯ ಮೈಯ ಅವರೊಡನೆ ಶಿಕಾಗೊ ನಗರದ ಬಡಾವಣೆಯಾದ ಡೇರಿಯನ್ ನಲ್ಲಿ ವಾಸಿಸುತ್ತಿದ್ದಾರೆ. ಇವರ ಕತೆಗಳು ಅಮೆರಿಕನ್ನಡ, ಶಿಕಾಗೊವಲಯದ ಕನ್ನಡ ಪತ್ರಿಕೆ ಸಂಗಮ ಹಾಗೂ ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಮರೀಚಿಕೆ ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಶಿಕಾಗೊ ಕನ್ನಡ ಪತ್ರಿಕೆ ‘ಸಂಗಮ’ದ ಸಂಪಾದಕಿಯಾಗಿದ್ದರು. ಕನ್ನಡ ಸಾಹಿತ್ಯ ರಂಗ ಪ್ರಕಟಿಸಿರುವ ಎಲ್ಲ ಪುಸ್ತಕಗಳಿಗೂ ಸಹ ಸಂಪಾದಕಿಯಾದವರು. ಅಲ್ಲದೆ ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.