ಅಮೆರಿಕನ್ನಡ
Amerikannada
ಡಾ. ಬಿ. ಬಿ. ರಾಜಪುರೋಹಿತ
ಸಂಶೋಧನಾ ಶಿಷ್ಯವೇತನವನ್ನು ಪಡೆದು, ‘ವಚನ ಸಾಹಿತ್ಯದ ವ್ಯಾಕರಣ’ಎಂಬ ವಿಷಯವನ್ನಾರಿಸಿಕೊಂಡು, ಅವರು ಡಾ| ಆರ್.ಸಿ. ಹಿರೇಮಠರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಆನಂತರ ಅವರು ಭಾಷಾವಿಜ್ಞಾನದ ಕಡೆಗೆ ಗಮನ ಹರಿಸಿ ಬೇಸಿಗೆ ಶಾಲೆಗಳಲ್ಲಿ ಜ್ಞಾನಾರ್ಜನೆ ಮಾಡಿ, ಧ್ವನಿವಿಜ್ಞಾನದಲ್ಲಿ ಅಪಾರ ಸಂಶೋಧನೆ ನಡೆಸಿ, ಭಾರತದಲ್ಲಿಯೇ ಶ್ರೇಷ್ಠ ಧ್ವನಿವಿಜ್ಞಾನಿಯೆಂದು ಹೆಸರು ಗಳಿಸಿರುತ್ತಾರೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಕೇರಳ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗ, ಕೊನೆಗೆ ಮೈಸೂರಿನ ಭಾರತೀಯ ಭಾಷಾ ಕೇಂದ್ರ ಸಂಸ್ಥೆ, ಕ್ರಮವಾಗಿ ಈ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ಈಗ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.