ಅಮೆರಿಕನ್ನಡ
Amerikannada
ವಿಶ್ವ, ಸ್ಯಾನ್ ರಮೋನ್
ಬಾಳೆಹೊನ್ನೂರಿನಲ್ಲಿ ಹುಟ್ಟಿ, ಮೈಸೂರಿನಲ್ಲಿ ಓದಿ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಕೆಲಸ ಮಾಡುತ್ತ ಕಳೆದ ನಲವತ್ತು ವರ್ಷಗಳಿಂದ ಆಮೇರಿಕಾದಲ್ಲಿ ಜೀವನ ಮಾಡುತಿದ್ದಾರೆ. ಅವರ ತಾಯಿಯವರು, ತಮ್ಮ ಅರವತ್ತರ ತಾರುಣ್ಯದಲ್ಲಿ, Open University MA ಪದವಿಗೆ ಸೇರಿದ ಉದಾಹರಣೆಯಿಂದ, ಅವರು ಸಹ ತಾಯ್ನುಡಿಯನ್ನು ಕಲಿಯಲು ಶುರುಮಾಡಿದ್ದಾರೆ. ಅವರು ಕಲಿತ ಕಂಪ್ಯೂಟರ್ ವಿದ್ಯೆಯನ್ನು ಉಪಯೋಗಿಸಿ ಹಿಂದು ಧರ್ಮದ ಕೆಲ ವಿಚಾರಗಳನ್ನು ಪ್ರಾಯೋಗಿಕವಾಗಿ ತೋರಿಸಿಕೊಡಬಲ್ಲ ಯಂತ್ರಗಳನ್ನು ರಚಿಸಿದ್ದಾರೆ. ಅವರು ಕಲಿಯುತ್ತಿರುವ ಕನ್ನಡದಲ್ಲಿ ಶ್ರೀ ಹರಿಹರೇಶ್ವರರ “ಸ್ನೇಹದಲ್ಲಿ ನಿಮ್ಮ” ಸಂಕೇತವನ್ನು ಅಳವಡಿಕೊಂಡು ಕನ್ನಡ ಪದ್ಯಗಳನ್ನು ಕನ್ನಡಿಗರ (ಮಕ್ಕಳ) ವಿದ್ಯೆಯ ಪ್ರಸಂಶೆ ಹಾಗು ನೈಮಿತ್ತಿಕ ಉಡುಗೆರೆಗಳಾಗಿ ರಚಿಸುತ್ತಿದ್ದಾರೆ.