ಅಮೆರಿಕನ್ನಡ
Amerikannada
ಜ್ಯೋತಿ ಮಹದೇವ್
  • * ಕಥೆ, ಕವನಗಳ ರಚನೆ, ಓದು, ಚರ್ಚೆ, ವಿಮರ್ಶೆ ಮುಂತಾದ ಸಾಹಿತ್ಯಿಕ ಹವ್ಯಾಸಗಳಲ್ಲಿ ತೊಡಗಿಸಿಕೊಂಡವರು ‘ಸುಪ್ತದೀಪ್ತಿ’ ಕಾವ್ಯನಾಮದ ಜ್ಯೋತಿ ಮಹಾದೇವ್.
  • * ‘ಭಾವಲಹರಿ’, ‘ಭಾವಗಾನ’, ‘ಭಾವಬಿಂಬ’, ‘ಭಾವಲೋಕ’- ಪ್ರಕಟಿತ ಕವನ ಸಂಕಲನಗಳು;
  • * ‘ಭಾವಯಾನ’ ಕಥೆ-ಹರಟೆಗಳ ಸಂಗ್ರಹ.
  • * ‘ಸುಪ್ತದೀಪ್ತಿ-ಇನ್ನರ್ ಲೈಟ್’ ಹಾಗೂ ‘ಹರಿವ ಲಹರಿ’ ಎಂಬ ಬ್ಲಾಗ್‌ಗಳನ್ನು ನಡೆಸುತ್ತಿರುವರು.
  • * ಮನಃಶಾಸ್ತ್ರ, ಅಧ್ಯಾತ್ಮ, ಸಂಪೂರ್ಣ (ಮನೋ-ದೈಹಿಕ) ಸ್ವಾಸ್ಥ್ಯ, ಪ್ರಕೃತಿ ಚಿಕಿತ್ಸೆಗಳಲ್ಲಿಯೂ ಆಸಕ್ತಿ ಹೊಂದಿರುವರು.
  • * ಮಂಗಳೂರಲ್ಲಿ ಹುಟ್ಟಿ, ಪುತ್ತೂರು-ಕಾರ್ಕಳಗಳಲ್ಲಿ ಬೆಳೆದು, ಬಿ.ಎಸ್.ಸಿ. ಹಾಗೂ ಕನ್ನಡ ಎಂ.ಎ. ಪದವಿ ಪಡೆದವರು. ಹಲವಾರು ವರ್ಷ ಕ್ಯಾಲಿಫೋರ್ನಿಯಾ ಬೇ ಏರಿಯಾದಲ್ಲಿವಾಸವಾಗಿದ್ದು ಈಗ ಪತಿಯೊಂದಿಗೆ ಮಣಿಪಾಲದಲ್ಲಿ ನೆಲೆಸಿದ್ದಾರೆ.
  • * ಫಿಟ್‌ನೆಸ್ ಮತ್ತು ಹಿಪ್ನೋಥೆರಪಿಗಾಗಿ ಮಣಿಪಾಲದಲ್ಲಿ ‘ಇನ್ನರ್‌ಲೈಟ್ ವೆಲ್‌ನೆಸ್ ಸೆಂಟರ್’ ಆರಂಭಿಸಿ, ಸಂಪೂರ್ಣ ಸ್ವಾಸ್ಥ್ಯದತ್ತ ಆಸಕ್ತರನ್ನೊಯ್ಯುವಂಥ ಜನಸೇವೆಯಲ್ಲಿದ್ದಾರೆ.