ಅಮೆರಿಕನ್ನಡ
Amerikannada
ಎರಡು ಹಣತೆಗಳು
ಆಶಾ ಭಟ್ (ಫ್ರೀಮಾಂಟ್, ಕ್ಯಾಲಿಫೋರ್ನಿಯಾ)
ಹಚ್ಚಿದಿರಿ ಬೆಳಕ ಹಣತೆಗಳೇ
ನೀವು ಇದ್ದೆಡೆಯೆಲ್ಲ,
ಮೆಚ್ಚಿದಿರಿ ಮಿಣುಕುಗಳ
ನೀವು ಕಂಡೆಡೆಯೆಲ್ಲ,
ಹೆಚ್ಚಿಸಿದಿರಿ ಮಿಣುಕುಗಳ ಬೆಳಕ
ನಿಮ್ಮೆಡೆಗೆ ಬಂದಾಗಲೆಲ್ಲ,
ಬಿಚ್ಚಿದಿರಿ ಕರಗಳನು ಬೆಳಕ ಏರಿಸಲು.
ಮಿಣುಕುಗಳ ಸೇರಿಸಲು.
ಕಷ್ಟ ಸುಖಗಳ ಬದುಕ
ಉಂಡ ಹಣತೆಗಳು,
ಎಡರು ತೊಡರುಗಳ ಬಾಳ
ಕಂಡ ಹಣತೆಗಳು,
ಸರಳ ಮಂತ್ರದ ಮಾಂತ್ರಿಕತೆಯ
ಮೆರೆದ ಹಣತೆಗಳು.
ಹಲವು ಮಿಣುಕುಗಳ ಹಣತೆಯಾಗಿಸಿ
ದೂರ ಸರಿದರೂ....
ಬೆಳಕ ಬೀರುತ್ತಲೇ ಇರಲಿ,
ತೈಲ ಮುಗಿಯದಿರಲಿ,
ಬತ್ತಿ ಆರದಿರಲಿ.
(ಶಿಕಾರಿಪುರ ಹರಿಹರೇಶ್ವರ ಕುರಿತು ಬರೆದ ಕವನ)