ಅಮೆರಿಕನ್ನಡ
Amerikannada
ಹರಿ ಕನ್ನಡದ ಐಸಿರಿ
-ಚಾಮಶೆಟ್ಟಿ, ಮೈಸೂರು
ಕನ್ನಡಮ್ಮನ ಮಂಗಳ ಕಾರ್ಯ ಮಾಡಿಸದೆ
ನೂರು ಕಾಲ ಬಾಳಿಸದೆ; ನಗರದಲಿ
ಕೀರ್ತಿಗಳಿಸಿದ ಸಾಹಿತಿಯ
ಜೀವವನೇ ಕದ್ದು ಕನ್ನಡ ಗುಡಿಯ
ಕತ್ತಲು ಮಾಡಿ ಹೋದ ಜವರಾಯ

ಶ್ರೀ ಹರಿಹರೇಶ್ವರರು ಕನ್ನಡ ಪ್ರಿಯರು
ಸಹೃದಯರು, ಸೃಜನಶೀಲರು
ಅಮೆರಿಕದಲ್ಲಿ ಕನ್ನಡಮ್ಮನ ಹಿರಿಮೆ
ಮೆರೆಸಿದ ಮಹಾನ್ ಚೇತನರು

ಇವರ ಅಗಲಿಕೆ ತುಂಬಲಾಗದ ನಷ್ಟವಾಗಿದೆ
ಇವರ ಆತ್ಮಕೆ ಚಿರಶಾಂತಿ ದೊರಕಲಿ
ಇವರ ಕುಟುಂಬಕೆ ನೆಮ್ಮದಿ, ಶಾಂತಿ
ಕರುಣಿಸಲಿ ಶ್ರೀ ಚಾಮುಂಡೇಶ್ವರಿ