ಅಮೆರಿಕನ್ನಡ
Amerikannada
ನಾಗಲಕ್ಷ್ಮಿ ಹರಿಹರೇಶ್ವರ
-ಜಯಪ್ಪ ಹೊನ್ನಾಳಿ
ನಾಗಲಕ್ಷ್ಮಿ ಹರಿಹರೇಶ್ವರ
ಎರಡೂ ಒಂದೇ ಮಹತ್ತರ!
ಒಂದು ಸಾಗರ ಒಂದು ಮೇರು
ಅಳೆಯದಾಳಗಳೆತ್ತರ!

ಯಾರೆ ಇರಲಿ, ಯಾರೇ ಬರಲಿ
ಎಲ್ಲರಿಗೂ ಬಾ ಹತ್ತಿರ
ತಮ್ಮಲಿರುವುದು ಇಲ್ಲದವರಿಗೆ
ಸಲ್ಲಲೆಂಬುದೆ ಉತ್ತರ

ಲಕ್ಷ್ಮಿ ಪತ್ನಿ ಸ್ಥಿತಿಯ ಹರಿಗೆ
ನಾಗಾಭರಣ ಲಯದ ಹರಗೆ
ಒಂದು ಶಬ್ದ ಒಂದು ಅರ್ಥ
ಶಬ್ದಾರ್ಥ ಸುಂದರ ಸಂಗಮ

ಭೇರುಂಡದೊಲು ಏಕಮೇವ
ಅವಿನಾಭಾವ ಸಂಭ್ರಮ
ಒಂದೇ ಜೀವ ಒಂದೇ ಭಾವ
ಈಡು ಜೋಡು ಜಂಗಮ

ಯಾರೊ ಮೆಚ್ಚಿಸೆ ಸವೆಯರಿವರು
ಗಂಧ ತರುಗಳ ತರಹರ
ಬಿರುದು ಭಾವಲಿ ಎಂದೂ ಬೇಡದ
ಚಂದ್ರ ತಾರೆ ನಿರಂತರ

ಕನ್ನಡವೆ ಕೈಲಾಸವೆನುವ
ಇವರದೆಂತು ನಶ್ವರ!?
ನಾಗಲಕ್ಷ್ಮಿ ಹರಿಹರೇಶ್ವರ
ಕನ್ನಡರ್ಧನಾರೀಶ್ವರ!