ಅಮೆರಿಕನ್ನಡ
Amerikannada
ಕನ್ನಡಿಗ..... ಅಮೆರಿಕನ್ನಡಿಗ
-ಡಾ. ನಾಗಭೂಷಣ ಮೂಲ್ಕಿ, ಚಿಕಾಗೋ, ಇಲಿನಾಯ್, ಅಮೆರಿಕ
ಈ ಜೀವನ ಗದ್ದಲದಲ್ಲೂ
ಆ ಜೀವದ ತುಮುಲದಲ್ಲೂ
ಕನ್ನಡ ಸಾಹಿತ್ಯವ ಬೆಳೆಸಿದೆ
ಕನ್ನಡ ಅಮೃತವ ಉಣಿಸಿದೆ

ನಿನ್ನ ಆಸೆ ಆಶಯದಲ್ಲೂ ಎಲ್ಲಾ
ಎಲ್ಲರ ನಮ್ಮಯ ಆಶ್ರಯದಲ್ಲೂ
ಬೆಳೆಸಿದೆ ನಮ್ಮಯ ಕನ್ನಡವ
ಹೆಮ್ಮೆಯ ಹಿರಿ ಸಿರಿಗನ್ನಡವ

ಯಾ೦ತ್ರಿಕ ಜೀವನಕೆ ಇದುವೇ ತ೦ತ್ರ
ಕನ್ನಡವೇ ಅದು ಒ೦ದೇ ಮಹಾಮ೦ತ್ರ
ಜೀವಕೆ ಅದುವೇ ಉಸಿರು ಆಗಿಸಿದೆ
ಈ ಬಾಳನು ನೀ ಹಸಿರು ಮಾಡಿಸಿದೆ

ಕನ್ನಡದೊ೦ದು ಉಸಿರು ನಿ೦ತೇ ಹೋಯಿತು
ಕನ್ನಡ ಕ೦ಪು ಸೊ೦ಪಾಗಿ ಹಬ್ಬಿ ಉಳಿಯಿತು
ಹೆಮ್ಮೆಯ ನಮ್ಮಯ ಕನ್ನಡ ಕನ್ನಡಿಗ ನೀನಾದೆ
ಅಮರ ಅಮೇರಿಕನ್ನಡಿಗ ನೀನೆನಿಸಿರುವೆ


ಶ್ರೀಯುತ ಹರಿಹರೇಶ್ವರ ಅವರನ್ನು ಕುರಿತು ಬರೆದ ಕವನ.