ಅಮೆರಿಕನ್ನಡ
Amerikannada
ನೀನೆ ದೇವರು
-ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೇಲ್, ಕ್ಯಾಲಿಫೋರ್ನಿಯಾ
ನುರಿತವರು ನುಡಿದಿಹರು
ನೀನೆ ದೇವರು ಎಂದು
ನಾನು ದೇವರಾಗುವುದು
ಅತಿ ಸುಲಭವೆಂದೇನು

ಆಚಾರ ವಿಚಾರಗಳು
ನಡೆನುಡಿಯ ಮಾತುಗಳು
ಶುಚಿತ್ವವನು ಪಡೆದು
ನೂರ್ಮಡಿಯಾದಂದು

ತನ್ನತಾನೆ ಮರೆತು
ದೈವತ್ವವನು ಪಡೆದು
ಲೋಕಕ್ಕೆ ಬೆಳಕನಿತ್ತು
ಬಾಳನೂಕಿದಂದು

ಆಗಬಹುದೇನೋ
ಶ್ರೀಹರಿಯ ಅನುಗ್ರಹವು
ಒಂದು ಜನುಮ ಸಾಕೇನೊ
ಅರಿತವರು ಯಾರುಂಟು