ಅಮೆರಿಕನ್ನಡ
Amerikannada
ಆಸರೆಯಿಲ್ಲದ ಬಾಳು
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ಆಸರೆಯಿಲ್ಲದ ಬಾಳು;
ಬೇಸರ ಹಗಲೂ ಇರುಳು;
ಸಂಗಾತಿ ದೂರಾಗಿ,
ಕಣ್ಣಿಂದ ಮರೆಯಾಗಿ,
ಮನವು ಬಾಡಿದ ಹೂವು!

ಹೃದಯದಾ ಸಮ್ಮಿಲನ,
ಹಾಲಲಿ ಕರಗಿದ ಜೇನಂತೆ;
ಬಿಡಿಸಲಾಗದ ಬಂಧನ,
ಕಡಲ ಸೇರಿದ ನೀರಂತೆ;
ನಿನ್ನಲಿ ಬೆರೆತೆ, ನನ್ನನೆ ಮರೆತೆ;
ದೇಹಗಳೆರಡು ಜೀವ ಒಂದಂತೆ;
ನೀನಿಲ್ಲದೇ...
ಹಸಿರು ತೊರೆದ ಚಿಗುರಂತೆ;
ಉಸಿರು ತೊರೆದ ಒಡಲಂತೆ;

ಕನಸಲಿ ಕಂಡವನ,
ಸನಿಹ ಕೋರಿ ನಾ ಸೋತೆ;
ಮನದಿ ಮನೆ ಮಾಡಿರುವ,
ಮಧುರ ನೆನಪಲಿ ನಾ ನೊಂದೆ;
ಹೃದಯ ವೀಣೆ ನಮ್ಮ ಹಾಡು
ಮೀಟಿ ನುಡಿಸಿದೆ ಕೇಳದೇನು?
ನೀನಿಲ್ಲದೇ....
ಅರ್ಥವಿರದ ಬಾಳಂತೆ;
ವ್ಯರ್ಥ ಶೂನ್ಯ ಬದುಕಂತೆ.


(ರಚನೆ: ದಿನಾಂಕ: ಜೂನ್ ೧೯೯೯)