ಅಮೆರಿಕನ್ನಡ
Amerikannada
ನಿನ್ನೊಲವೆ ದೇಶದೆಡೆ
ಬಹು ಜನಪ್ರಿಯ ಭಾರತದ ಮಾಜಿ ರಾಷ್ಟ್ರಾಧ್ಯಕ್ಷ ಡಾ. ಅಬ್ದುಲ್  ಕಲಾಂ ಅವರು ಏಪ್ರಿಲ್ ೨೩ ಮತ್ತು ೨೪, ೨೦೧೧  ಶಿಕಾಗೋಕ್ಕೆ  ಭೇಟಿ ಕೊಟ್ಟಿದ್ದರು. ಡಾ. ನಾಗಭೂಷಣ ಮೂಲ್ಕಿ ಅವರು ಡಾ. ಅಬ್ದುಲ್  ಕಲಾಂ ಬಗ್ಗೆ ಕನ್ನಡ ಕವನ ಇರುವ "ಭಾವ ಸ್ಪರ್ಶ" ಕವನ ಸಂಕಲನವನ್ನು  ಡಾ. ಕಲಾಂ ಅವರಿಗೆ ಕೊಟ್ಟರು.  ಓದುಗರಿಗಾಗಿ ಆ ಕವನ ಇಲ್ಲಿದೆ ಓದಿ.
-ಡಾ. ನಾಗಭೂಷಣ ಮೂಲ್ಕಿ ಶಿಕಾಗೋ, ಅಮೆರಿಕ
ನಿನ್ನೊಲವೆ ದೇಶದೆಡೆ
ನಿನ್ನೊಲವೆ ದೇಶದೆಡೆ
ನಿನ್ನ ಗೆಲುವು ದೇಶದ ಕಡೆIIನಿII

ಕಡೆ ಕಡೆಗಣಿಸದೆ
ಕಾ ಕಾಗುಣಿಸದೆ
ಸಂಚನು ಮಾಡದೆ
ವಂಚನೆ ಮಾಡದೆIIನಿII

ನಡೆದೇ ಮುನ್ನಡೆದೆ
ನಡೆಸಿ ಮುನ್ನಡೆಸಿದೆ
ಮಾನ್ಯತೆ ನೀಡಿಸಿ
ಯಶೋದಾರಿಯಾದೆIIನಿII

ಅಭಾಗ್ಯರ ಭಾಗದ
ಬಾಗಿಲು ತೆರೆಸಿದೆ
ದೇಶದ ಉನ್ನತಿಗೆ
ನಾಂದಿ ಹಾಡಿದೆIIನಿII

ಓ ಭರಥೊತ್ತಮನೆ
ನೀ ನರೋತ್ತಮನೆ
ಯುವ ಜನಾಂಗಕೆ
ನೀ ಸರ್ವೋತ್ತಮನೆIIನಿII