ಅಮೆರಿಕನ್ನಡ
Amerikannada
ಹೊಂಬೆಳಕು
ತೋಯೇ ಶೈತ್ಯಂ, ದಾಹಕತ್ವಂ ಚ ವಹ್ನೌ,
ತಾಪೋ ಭಾನೌ, ಶೀತಭಾನೌ ಪ್ರಸಾದಃ|
ಪುಷ್ಪೇ ಗಂಧೋ, ದುಗ್ಧಮಧ್ಯೇ ಪಿ ಸರ್ಪಿರ್,
ಯತ್ ಯತ್, ಶಂಭೋ, ತ್ವಂ ತತಸ್, ತ್ವಾ೦ ಪ್ರಪದ್ಯೇ||
-ಶಿವಪುರಾಣ, ರುದ್ರ ಸಂಹಿತಾ ೧೩:೪೫
ನೀರಿನಲಿ ಇನಿ ತಂಪು, ಬೆಂಕಿಯಲಿ ಉರಿ ಕೆಂಪು,
ಹೂವಿನಲಿ ಘಮಘಮಿಪ ಮನಸೆಳೆವ ಕಂಪು,
ಸುಡು ತಾಪ ರವಿಯಲ್ಲು, ಚಂದ್ರನಲಿ ತಂಬೆಳಕು,
ಹಾಲಿನೊಳಗಡೆ ತುಪ್ಪವಿರುವಂತೆ ಹುದುಗಿ-
ಸೇರಿ ನನ್ನೊಳಗೇ ಇರು ನೀನು, ಬೇರಾಗದೆ!
ಬೇಡಿ ಹಾಡುವೆ, ಶಿವನೆ, ನಾ ಮನದಣಿಯದೆ!!
-ಶಿಕಾರಿಪುರ ಹರಿಹರೇಶ್ವರ