ಅಮೆರಿಕನ್ನಡ
Amerikannada
ಹೃದಯೇಶ್ವರರು ನೀವು ಅಮೆರಿಕನ್ನಡೇಶ್ವರರು
-ಮಾಗಲು ಮಲ್ಲಿಕಾರ್ಜುನ*
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕುವೆಂಪು ದೀಕ್ಷಾಮಂತ್ರವನ್ನು
ತ್ರಿಕರಣಶುದ್ಧಿಯಾಗಿ ಕಾರ್ಯಗತಗೊಳಿಸಿದ
ಕನ್ನಡದ ರಾಯಭಾರಿ
ಕನ್ನಡವನೆ ಉಸಿರಾಡುವ ನೀವು
ಕನ್ನಡವನೆ ಹಸಿರಾಗಿಸಿಹ ನೀವು
ವೈದ್ಯರು ಎದೆ ಬಗೆದು ನೋಡಿದರೂ
ಅವರಿಗೇ ವಿಸ್ಮಯ, ಆಶ್ಚರ್ಯ!! ಕಾರಣ
ಅಲ್ಲಿ ಹೃದಯವು ಜಪಿಸುತ್ತಿತ್ತು ಕನ್ನಡವನ್ನೇ!!

ತಮ್ಮ ಬಗ್ಗೆ ಎರಡಕ್ಷರದಲ್ಲಿ ವರ್ಣಿಸಲು ಸಾಧ್ಯವೇ
ನೀವೊಬ್ಬ ಕನ್ನಡದ ಮೇರುಪರ್ವತ
ಸಾಹಿತ್ಯದ ಕಲ್ಪವೃಕ್ಷ, ವಿದ್ಯಾರ್ಥಿಗಳ ಕಾಮಧೇನು
ತಾವು ಎಸ್.ಕೆ. ಹರಿಹರೇಶ್ವರ ಅಲ್ಲ
ಶುದ್ಧ ಕನ್ನಡ ಹರಿಹರೇಶ್ವರ
ನೀವು ಎಲ್ಲೂ ಹೋಗಿಲ್ಲ ಎಲ್ಲೂ ಇಲ್ಲ
ಇಲ್ಲೇ, ನಮ್ಮಲ್ಲೇ, ನಮ್ಮೊಳಗೇ ಇದ್ದೀರಿ
ಸ್ವರ್ಗ-ನರಕಗಳ ನಂಬಿಕೆಯಿಲ್ಲದ ನೀವು
ಸ್ವರ್ಗವನ್ನು ಜೀವಂತಿಕೆಯಲ್ಲೇ ಕಂಡವರು
ತುಂಬು ಜೀವನ ನಡೆಸಿದವರು
ಕನ್ನಡದ ಧ್ರುವತಾರೆಯಾಗಿ ಮೆರೆದವರು
ಹೃದಯೇಶ್ವರರು ನೀವು ಅಮೆರಿಕನ್ನಡೇಶ್ವರರು
*ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯