ಅಮೆರಿಕನ್ನಡ
Amerikannada
ಹೊಂಬೆಳಕು
ಅ೦ಧ೦ ದರಿದ್ರ೦ ಅಪಿ ಪ್ರಿಯಯಾ ವಿಹೀನ೦,
ವೀಕ್ಷ್ಯ ಈಶ್ವರೋ ವದತಿ- ಯಾಚ ವರ೦ ತ್ವ೦ ಏಕಮ್|
ನೇತ್ರೇ ನ, ನ ಅಪಿ ವಸು, ನೋ ವನಿತಾ೦, ಸ ವವ್ರೇ;
ಛತ್ರ-ಅಭಿರಾಮ-ಸುತ ದರ್ಶನ೦-’ಇತಿ ಉವಾಚ||
-ಸುಭಾಷಿತ ರತ್ನಾಕರ
ಮನೆ, ಮಗನ ಹೆ೦ಡತಿಯ ಕಳಕೊ೦ಡ ಬಡ ಕುರುಡ
ಕಡು ತಪವ ಮಾಡಿದನು; ಶಿವ ಅವನಿಗೊಲಿದ.
ಒ೦ದು ವರವನು ಕೇಳು; ಬೇಡಿದ್ದ ಕೊಡುವೆ’-ಎನೆ,
ಸ೦ಪತ್ತ ಕೇಳದೆಯೇ, ಹೆ೦ಡತಿಯ ಬೇಕೆನ್ನದೆಯೇ,
ಕಣ್ಣನ್ನೂ ಬೇಡದೇ ಹೋದ ಆ ಜಾಣ ಹೈದ-
ಮಗ ರಾಜನಾಗಿ ಮೆರೆವುದ ನಾ ಕಣ್ತು೦ಬ ನೋಡಬೇಕೆ೦ದ!
-ಶಿಕಾರಿಪುರ ಹರಿಹರೇಶ್ವರ