ಅಮೆರಿಕನ್ನಡ
Amerikannada
ನಗುತ ಸಾಗಲಿ ಪಯಣ
ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೇಲ್, ಕ್ಯಾಲಿಫೋರ್ನಿಯ

ಹೋಗಿಬಾ ನನಕಂದ
ನಗುತ ಸಾಗಲಿ ಪಯಣ
ಹುಟ್ಟಿದಾ ಮನೆಯಿಂದ
ಮೆಟ್ಟುವಾ ಮನೆತನಕ


ತವರು ನೀಡಿದಾಶೀರ್ವಾದ
ನಡೆನುಡಿಯು ನನಕಂದ
ಕಾಪಾಡು ಕಡೆತನಕ
ಕೀರ್ತಿ ಗಳಿಸುವೆ ಚಿನ್ನ


ಚಿನ್ನನಿನ್ನನು ಹಡೆದ
ಪುಣ್ಯ ತವರಿನದಮ್ಮ
ಮೆಟ್ಟುವ ಮನೆ ನಿನ್ನ
ಸೌಭಾಗ್ಯ ಕಾಯುವುದಮ್ಮ


ಕೀರ್ತಿ ನಿನದಾಗಿರಲಿ
ಚಿರನಗುವು ತುಂಬಿರಲಿ
ಬಾಳು ಸುಂದರವಿರಲಿ
ನಮ್ಮಹರಕೆ ಸ್ಥಿರವಿರಲಿ