ಅಮೆರಿಕನ್ನಡ
Amerikannada
“ಓತಾಯಿ ಭಾರತಾಂಬೆ”
ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೇಲ್, ಕ್ಯಾಲಿಫೋರ್ನಿಯ.
ಓತಾಯಿ ಭಾರತಾಂಬೆ
ನೀನು ಅಬಲೆಯೇನಮ್ಮ
ಸರಿಸಮ ನೀನಲ್ಲವೇನೆ
ಭುವಿಯ ಸೋದರಿಯರಿಗೆ


ಎಂದು ಮರುಗಿದನೋರ್ವ
ಭಾರತೀಯ ಸತ್ಪುರುಷ
ಹೊರದೇಶಗಳಸುತ್ತಿ ಸರ್ವ
ಪ್ರಗತಿ ಕಂಡು ಬಂದಾಗ


ಸಕಲ ಸಂಪದವುಂಟು
ಸಂವೃದ್ಧಿ ತುಂಬಿಹುದು
ಸಂತಾನದ ಕುಂಟು
ಸರಿಹೋಗುವುದು ಎಂದು


ಬುದ್ಧಿಜ್ಞಾನ ಸಂಪತ್ತು
ಅಂಚುವಷ್ಟು ಬೆಳೆದಿಹುದು
ದುಷ್ಟ ಶಕ್ತಿಗಳನ್ನು
ಧ್ವಂಸ ಮಾಡುವುದೆಂದು