ಅಮೆರಿಕನ್ನಡ
Amerikannada
ಹೊಂಬೆಳಕು
ತಪಃ ಕುರ್ವನ್ತೀಂ ಭಗವಾನ್ ಪಪ್ರಚ್ಛ,
ತುಷ್ಟೋಸ್ಮಿ ಬಾಲೇ, ವರಂ ಏಕಂ ಯಾಚ
ಪುತ್ರೈಶ್ ಚ ಪೌತ್ರೈಶ್ ಚ ಭರ್ತೃಸಮೇತಂ,
ಇಚ್ಛಾಮಿ ಭೋಜನಂ ಹಿರಣ್ಯಪಾತ್ರೇ
-ಸುಭಾಷಿತ
ಮದುವೆಯಾಗದೆ ಉಳಿದು, ಬೆಳೆದ ಹುಡುಗಿಯು ಕುಳಿತು,
ತಪಗೈದು ಕಣ್ದೆರೆಯೆ, ದೇವರೇ ಎದುರು ಬರೆ,
ವರವನೊಂದನು ಬೇಡು, ಕೊಡುವೆ”-ಎಂದನಂತೆ;
ಜಾಣೆ, ಏನ ಕೇಳಿದಳಾಗ, ಊಹಿಸಿರಿ ಅವಳ ಮೊರೆ-
ನನ್ನ ಮಕ್ಕಳ ಜೊತೆಗೆ, ಅನುದಿನವೂ ಇನಿಯನ ಕೂಡೆ,
ಅನುಗ್ರಹಿಸು, ಬಂಗಾರ ಹರಿವಾಣದಿ ಅನ್ನ ತಿನ್ನುವಂತೆ!
-ಶಿಕಾರಿಪುರ ಹರಿಹರೇಶ್ವರ