ಅಮೆರಿಕನ್ನಡ
Amerikannada
ಅಕ್ಕ ಚಂದಿರೆಗೊಂದು ಪುಟ್ಟ ತಂಗಿ ಇಂದಿರೆ
-ಡಾ. ಕೆ.ಆರ್.ಎಸ್. ಮೂರ್ತಿ, ಕ್ಯಾಲಿಫೋರ್ನಿಯಾ
ಅಕ್ಕ ಚಂದಿರೆ; ಅವಳಿಗೊಂದು ಜೊತೆಗೆಚಿನ್ನಾರಿ ತಂಗಿ ಚಂದಿರೆ
ಸಾಕಲ್ಲ ಒಂದು ಇಂದಿರೆ; ಇನ್ನೊಂದು ಇರಲಿ ಚೊಕ್ಕ ಚಿಕ್ಕ ಇಂದಿರೆ

ಅಕ್ಕ ಸುತ್ತಿದರೆ ಅಮ್ಮ ಭೂಮಿಯ ಸುತ್ತ, ಅವಳತಂಗಿಯವಳ ಹಿಂದು
ನಾಲ್ಕು ಬಿಲ್ಲಿಯನ್ನು ವರುಷದ ಹಿಂದೆ ಇಂದುಒಂದಲ್ಲ ಮತ್ತೊಂದು

ನಾನಿರಲಿಲ್ಲ, ನೀವಾರೂ ಇರಲೇ ಇಲ್ಲ; ಜೀವ ಜಂತುಗಳೇ ಇರಲಿಲ್ಲ
ನೋಡುವರಿರಲಿಲ್ಲ; ಎರಡು ಚಂದಿರೆಯರ ಕಂಡುಹಾಡುವರಿರಲಿಲ್ಲ

ತಂಗಿ ಓಡಿ ಓಡಿ ಬಂದು ಅಕ್ಕನ ಹಿಂದೆ ಜೋರಾಗಿ ಡಿಕ್ಕಿ ಹೊಡೆದಾಗ
ತಂಗಿ ಮಾಯ; ಅಕ್ಕನಲ್ಲಿ ಐಕ್ಯ; ನೋಡಿ ಬೇಕಾದರೆ ಅಕ್ಕನ ಹಿಂಭಾಗ

ಅಕ್ಕನ ಹಿಂಭಾಗದಲಿ ಪುಟ್ಟ ಗೂನು; ನಾಚಿಕೆಯಲಿ ಅಕ್ಕ ಮುಚ್ಚಿಮರೆಚಿ
ಫಕ್ಕನೆ ಇಂದು ಚಂದಾದ ವದನೆಯಂತೆ ಮೊರೆ ತೋರಿಸುತ ಮರೆಮಾಚಿ

ತಂಗಿಯ ಶಾಪದ ಗೂನು ತೋರಿಸಳು; ಅವಳು ಹೆಣ್ಣಲ್ಲವೇ ನಾಚಿಕೆ ಸರಿಯೇ
ಖಗೋಳ ಗಣಿತ ಶಾಸ್ತ್ರಿಗಳು ಅವಳ ಜಾತಕವನು ನೋಡಿ ಹೇಳಿದುದು ಇದೆಯೇ