ಅಮೆರಿಕನ್ನಡ
Amerikannada
ಹೊಂಬೆಳಕು
ವಿದ್ಯಾ ವಿವಾದಾಯ, ಧನ೦ ಮದಾಯ,
ಶಕ್ತಿಃ ಪರೇಷಾಂ ಪರಿಪೀಡನಾಯ
ಖಲಸ್ಯ; ಸಾಧೋಃ ವಿಪರೀತಂ ಏತತ್-
ಜ್ಞಾನಾಯ, ದಾನಾಯ ಚ ರಕ್ಷಣಾಯ
-ಭವಭೂತಿ, ಗುಣರತ್ನ ೭
ಓದು ಒಣ ಜಗಳಕ್ಕೆ, ಹಣ ಸೊಕ್ಕಿ ಮೆರೆಯಲಿಕೆ,
ಶಕ್ತಿಯಿದೆ ಅಸಹಾಯಕರ ಪೀಡಿಸಲು- ಖಳಗೆ;
ಸಜ್ಜನರಿಗೋ ಉಪಯೋಗ ಇವುಗಳದೇ ಬೇರೆ-
ಜ್ಞಾನಕ್ಕೆ, ದಾನಕ್ಕೆ ಹಾಗೂ ರಕ್ಷಣೆಯ ಹೊಣೆಗೆ!
-ಶಿಕಾರಿಪುರ ಹರಿಹರೇಶ್ವರ