ಅಮೆರಿಕನ್ನಡ
Amerikannada
ಶ್ರೀ ಹರಿಹರೇಶ್ವರರಿಗೆ
-ಡಾ. ದೊಡ್ಡರಂಗೇಗೌಡ ಸಪ್ತಸಾಗರದಾಚೆ ಇದ್ದರೂ
ಸುಪ್ತವಾಗಿರೋ ನಿಮ್ಮ ಅಭಿಮಾನ
ದೀಪ್ತವಾಯಿತು ಅಮೆರಿಕೆಯಲ್ಲಿ
ವ್ಯಾಪ್ತಿ ಕಂಡಿತು ಸಂಘಟನೆಯಲ್ಲಿ
ಸೂಕ್ತ ತೊಡಗಿತು, ಸೃಜನೆಯಲ್ಲಿ!


ರಾಜ್ಯರಾಜ್ಯದಿ ನೀವು ಓಡಾಡಿ
ಕನ್ನಡಿಗರ ಸಂಘಟನೆಯ ಮಾಡಿ
‘ಅಮೆರಿಕನ್ನಡ’ ಮೆರೆಸಿದಿರಿ
ಪುಟ ಪುಟ ಕನ್ನಡ ತುಂಬಿದಿರಿ
ಪಟ ಪಟ ಕನ್ನಡ ಹಾಡಿದಿರಿ
ಪ್ರೀತಿ ಅಭಿಮಾನ ತೋರಿದಿರಿ
ಪತ್ರಿಕೆ ಮಾಡಿ ಮಿಂಚಿದಿರಿ
ಕನ್ನಡಿಗರಿಗೆ ಹಂಚಿದಿರಿ


ಎಲ್ಲಿಯ ನೀವು ಎಲ್ಲಿಯ ಅಮೆರಿಕ
ಎಲ್ಲಿದ್ದಿರಿ ಅಲ್ಲೇ ಕನ್ನಡದ ಪುಳಕ
ತಾಯ್ನುಡಿ ಆಡಿ ಮಾಡಿ ಕನ್ನಡ ಜಳಕ
ನಿರಂತರ ನಿಮ್ಮ ಕನ್ನಡ ಕಾಯಕ
ನಿಮ್ಮಭಿಮಾನದ ನುಡಿತೇರ ಪೂಜೆಗೆ
ನಿಮಗಿದೋ ನನ್ನ ನಲ್ಮೆಯ ವಂದನೆ!
ನಿಮ್ಮಿಂದಾಯ್ತು ಅಮೆರಿಕದಲ್ಲೂ
ಕನ್ನಡ ನುಡಿಯ ಸಿರಿ ಸಂವರ್ಧನೆ!
ನಿಮಗಿದೋ ನನ್ನ ಕೋಟಿಕೋಟಿ ವಂದನೆ!