ಅಮೆರಿಕನ್ನಡ
Amerikannada
ಗುಬ್ಬಿ ಗುಬ್ಬಿ ಗುಬ್ಬಚ್ಚಿ
-ಮಾಗಲು ಮಲ್ಲಿಕಾರ್ಜುನ, ಮೈಸೂರು
ಗುಬ್ಬಿ ಗುಬ್ಬಿ ಗುಬ್ಬಚ್ಚಿ
ಬಾರೋ ನೀನು ಪಾಪಚ್ಚಿ
ಕೊಡುವೆ ನಿನಗೆ ಅಕ್ಕಿನುಚ್ಚು
ನಮಗೆಲ್ಲ ನೀ ಅಚ್ಚುಮೆಚ್ಚು

ಮನೆಯಲ್ಲಿ ನೀ ಮನೆ ಮಾಡಿರುವೆ
ಮನೆ ತುಂಬಾ ಕಸ ನೀ ತುಂಬಿರುವೆ
ಕಸ ಹೊಡೆಯಲು ಅಮ್ಮನಿಗೆ ಸುಸ್ತಾಯ್ತು
ಇದುವೇ ನಿತ್ಯದ ಬದುಕಾಯ್ತು

ಕನ್ನಡಿ ಕಂಡರೆ ಕೋಪವೇಕೆ
ಕುಕ್ಕುವೆ ನೀನು ನಿತ್ಯವೇಕೆ
ಚೀಂವ್ ಚೀಂವ್ ಎನ್ನಲು ನೀನಣ್ಣ
ಕೋಲಿಡಿಯುತ ಬಂದನು ನಮ್ಮಣ್ಣ

ಗುಬ್ಬಿ ನೀ ಅಬಲೆಯಲ್ಲ
ನಾವಿರುವೆವು ನಿನ್ನ ಜೊತೆಯೆಲ್ಲ
ನಿನ್ನಯ ಮರಿಗಳ ಸಹವಾಸ
ನಮಗೇತಕೆ ಬೇಕು ಉಪವಾಸ

ಕಟ್ಟುವೆವು ನಾವು ಗೂಡನ್ನು
ವಾಸಿಸಿ ನೀವು ಇಲ್ಲಿನ್ನು
ಸ್ವಾಭಿಮಾನವೇ ನಿನಗೆ ಗುಬ್ಬಿಮರಿ
ನಿನ್ನ ಗೂಡೇ ನಿನಗೆ ಹೆಚ್ಚಾಯ್ತ ಮರಿ?