ಅಮೆರಿಕನ್ನಡ
Amerikannada
“ಸ್ವರ್ಣತೆರೆ ಹರಡಿತ್ತು”
ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೆಲ್, ಕ್ಯಾಲಿಫೋರ್ನಿಯ.
ಉದಯರವಿ ಮೂಡಿತ್ತು
ಸ್ವರ್ಣತೆರೆ ಹರಡಿತ್ತು
ಪ್ರಕೃತಿಯು ನಲಿದಿತ್ತು
ರವಿಯನ್ನು ಸ್ಮರಿಸಿತ್ತು

ದೈವವೇ ನೀ ಹೊರತು
ಬೇರಲ್ಲ ಪ್ರಭು ಎಂದು
ಚೈತನ್ಯ ಮೂರ್ತಿಯನು
ಹಾಡಿ ಕೊಂಡಾಡಿತ್ತು

ಪ್ರತ್ಯಕ್ಷ ದೈವ ನೀನು
ಪರೋಕ್ಷವೇನಿಲ್ಲ
ದಿನ ನಿತ್ಯ ನಮ್ಮನ್ನು
ಎಚ್ಚರಿಸುವ ದೈವ

ಉದಯಕಾಲದಿ ನಿನ್ನ
ಸ್ಮರಿಸುವ ಸೌಭಾಗ್ಯ
ಕರುಣಿಸಿ ಕಾದೆಮ್ಮ
ಯುಗವ ರಕ್ಷಿಸು ದೇವ