ಅಮೆರಿಕನ್ನಡ
Amerikannada
ಗಣೇಶ ವಂದನೆ
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ಶಿರಬಾಗಿ ನಮಿಸುವೆವು,
ಗಣಪತಿಯೆ ನಿನಗೆ!
ಕರಮುಗಿದು ವಂದಿಪೆವು,
ಗಜಮುಖನೆ ನಿನಗೆ!

ಆನೆಯ ಮುಖದವಗೆ,
ಪಾರ್ವತಿಯ ಪುತ್ರನಿಗೆ,
ವಿದ್ಯೆಯನು ನೀಡೆನುತ,
ಬುದ್ಧಿಯನು ಕೊಡು ಎನುತ!

ಸೊಂಡಿಲ ಬೆನಕನಿಗೆ,
ಸುಂಡಿಲಿಯ ಗಣಪನಿಗೆ,
ಮೋದಕವ ನೀಡುವೆವು,
ಶಿವಪುತ್ರ ಸುಮುಖನಿಗೆ!

“ಕನ್ನಡ ಕಲಿ” ಮಕ್ಕಳಿಗಾಗಿ ಬರೆದ ಗೀತೆ. ರವಿ ರವೀಂದ್ರನಾಥ್ ಅವರ ನಿರ್ದೇಶನದಲ್ಲಿ ಮಕ್ಕಳು ಹಲವಾರು ಬಾರಿ ಕನ್ನಡ ಕೂಟದಲ್ಲಿ ಹಾಡಿದ್ದಾರೆ. ಈ “ಗುಂಜನ” ಮಕ್ಕಳ ಸಮೂಹದಲ್ಲಿ, ಸುಮಾರು ೧೦೦ ಮಕ್ಕಳಿದ್ದು, “ಕನ್ನಡ ಕಲಿ” ಅಲಂಕಾರ ಪಟ್ಟಿ (ಸ್ಯಾಶ್) ತೊಟ್ಟು, ಶಿಸ್ತಿನಿಂದ ವೇದಿಕೆಯ ಮೇಲೆ ನಿಂತು, ಒಕ್ಕೊರಳಿನಿಂದ ಹಾಡುವುದು ಅತ್ಯಂತ ಜನಪ್ರಿಯವಾಗಿದೆ!