ಅಮೆರಿಕನ್ನಡ
Amerikannada
ಬೆಳಕಿನಾಟ
-ನಾಗಲಕ್ಷ್ಮೀ ಹರಿಹರೇಶ್ವರ

ನೆನಪಿದೆಯೆ? ಗೆಳತಿ
ಅಂದು ನಾನೂ ನೀನು
ಆಡಿದ ಬೆಳಕಿನಾಟ
ಕೈಯಲ್ಲಿ ಸುರ್‌ಸುರ್ ಬತ್ತಿ
ಒಂದು ಕೈಯಲ್ಲಿ ಮೊಂಬತ್ತಿ
ಚಿತ್ತ ಚಿತ್ತಾರವ ಮಾಡಿ
ನಲಿನಲಿದಾಡಿ, ಹಂಚಿಹರಡಿ
ಬೆಂಕಿ, ಗಾಳಿ, ನೀರಿನೊಡನೆ
ನಾವೂ ತೇಲಿ, ಪಟಾಕಿ ಹೊಡೆದು
ಹೊಡೆಸಿ, ಹಿರಿಯರಿಂದ ಗಂಡುಬೀರಿ
ಪಟ್ಟ ಪಡೆದು, ನಲಿದ
ಆದಿನ ನೆನಪಿದೆಯೇ ಗೆಳತಿ
ನೆನಪಿದೆಯೆ?
ನೆನ್ನೆ ಮೊನ್ನೆಯ ಹಾಗಿದೆ
ಕನಸಿನಲ್ಲಿ ಕಂಡ ಹಾಗಿದೆ
ಮತ್ತೆ ಆ ದಿನಗಳು ಬಂದಾವೆ?
ಬರುತ್ತಾವೆ? ಎಂದು? ಎಂದು?
ನಂದೊ? ನಿಂದೊ?