ಅಮೆರಿಕನ್ನಡ
Amerikannada
ಬಾ ಬೆಳಕೆ
-ಶಿಕಾರಿಪುರ ಹರಿಹರೇಶ್ವರ


ಬಾ ಬೆಳಕೆ, ಕಾಪಾಡು; ಹೃದಯದಲಿ ತಳವೂರು
ಕತ್ತರಿಸಿ, ಕಿತ್ತೊಗೆದು ಅಜ್ಞಾನ ಜಡತೆಯ ಬೇರು;
ಛಲ ಕೋಪ ಅತಿ ಆಸೆ ಅಸೂಯೆ ಕತ್ತಲ ತೌರು
ತಲೆಯೆನ್ನದಾಗಿಸದ೦ತೆ ಪ್ರಭಾವವನು ಬೀರು;
ತೆರೆಸಿ ಕಣ್ಣನು, ತೋರು
ಕತ್ತಲಲಿ ಕಳೆದುಳಿದ ಗುರುತಿಸದ ಮೇರು;
ಅರಳಿಸೆನ್ನ೦ಗಳದಿ ಸ್ನೇಹಸುಮಗಳ ನೂರು;
ಅನುದಿನವೂ ನಡೆ ನುಡಿಯಲೆಳೆದು ತಿಳಿವಿನ ತೇರು,
ಗಡಿಯ ದಾಟುವ ಸುಳಿವ ನೀಡು, ಕೃಪೆದೋರು!