ಅಮೆರಿಕನ್ನಡ
Amerikannada
ಕುಂಭ
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ಕುಂಭದಲ್ಲಿ ಗಾಳಿಯೋ?
ಗಾಳಿ ಸುತ್ತ ಕುಂಭವೋ?
ಮಣ್ಣಿನ ಈ ಹೊದಿಕೆಯಲ್ಲಿ,
ತನ್ನತನವ ಪಡೆದಿದೆ!

ದೊರಕಲೊಂದು ರೂಪರೇಷೆ,
ಪೂರ್ವ ಸ್ಮರಣೆ ನಾಶವಾಗೆ,
ಮನಸು ಪ್ರೇಮ ಹಂಚಿಕೊಂಡು,
ನಾನು ನನ್ನದೆನುತಿದೆ!

ಬಂದೇ ಬರುವುದೊಂದು ದಿನ;
ಮಣ್ಣ ಹೊದಿಕೆ ತೆರೆವ ದಿನ;
ಮಡಕೆ ಒಡೆದು ತೊರೆದ ಕ್ಷಣ,
ಬಟ್ಟಬಯಲು ನಗ್ನತನ!

ಮುರಿವುದೆಂದು, ಮಡಕೆ ಎಂದು,
ಅರಿತ ಜಾಣರಿರುವರೇನು?
ಮುರಿವುದೇಕೆ ಕುಡಿಕೆಯೆಂಬ,
ಮರ್ಮವರಿತು ನುಡಿವರಾರು?

ಮರಳಿ ಸೃಜಿಸಿ, ಮರಳಿ ತ್ಯಜಿಸಿ,
ಸೂತ್ರ ಹಿಡಿದು, ಪಾತ್ರ ಬೆಳೆಸಿ,
ಮಡಕೆ ಮಾಡಿ ನಲಿವರಾರು?
ಮತ್ತೆ ಅದನು ಮುರಿವರಾರು?