ಅಮೆರಿಕನ್ನಡ
Amerikannada
ಸಾಲು ದೀಪ ಹಚ್ಚಿರಿ
-ಶಾಂತಾ ಶ್ರೀನಿವಾಸಮೂರ್ತಿ, ವಾಷಿಂಗ್‌ಟನ್ ಡಿ.ಸಿ.


ಸಾಲು ದೀಪ ಹಚ್ಚಿರಿ
ತಮೋ ರಾಶಿ ಕಳೆಯಿರಿ

ಹಿರಿದು ಕಿರಿದು ದೀಪವೆಲ್ಲ ಕೊಡುವುದೊಂದೆ ಬೆಳಕು
ನಾನು ಮೇಲು ನೀನು ಕೀಳು ಎನುವುದದಕಿಲ್ಲ ಅಳುಕು

ಶುಭ್ರನೀಲ ಆಗಸದಲಿ ತಾರೆ ಮಿನುಗಲಿ
ದೀಪಾವಳಿಯ ಜ್ಯೋತಿ ನಾಡ ಬೆಳಗಲಿ
ನಮ್ಮ ನಿಮ್ಮ ಮನಕೆ ಇಂದು ಶಾಂತಿ ನೀಡಲಿ

ದೀಪ! ದೀಪ! ದೀಪಗಳ ಸರಮಾಲೆ
ದಿವಿಲೋಕದಿಂದ ಇಳಿದಿರುವಳು ಜ್ಯೋತಿಬಾಲೆ!

ಆಡಿಪಾಡಿ ನಲಿಯಿರಿ
ಪರಮಾನಂದ ಪಡೆಯಿರಿ
ಈ ವರುಷದ ದೀಪಾವಳಿ
ತರಲಿ ನಿಮಗೆಲ್ಲ ಹರುಷಾವಳಿ!