ಅಮೆರಿಕನ್ನಡ
Amerikannada
ಬೀರ್ಬಲ್ ಅಕ್ಬರ್ ಔಟ್ ಸೋರ್ಸ್ ಕಥೆ
-ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೊರ್ನಿಯಾ
ಘನಟೆಕ್ಕಿ ಬಳಗ ಸಿಸ್ಕೋ ಚಾಪ್ಟರ್ ಗೆಳೆಯರು
ಬನಾನಾ ಲೀಫ್‌ನಲಿ ಲಂಚ್ ಮಾಡುತಾ
ಅನುಭವಗಳನು ಆಡುಬಾಷೆಯೆಲ್ಲಿ ಬಣ್ಣಿಸಿ
ನೆನೆನೆನೆದು ಸಿಹಿ ಚಪ್ಪರಿಸುತಿದ್ದರು

ಆಮಾತು ಈಮಾತುಗಳೆಲ್ಲ ಮುಗಿದಮೇಲೆ
ಅಮೇರಿಕನ್ ಔಟ್‌ಸೋರ್ಸ್ ಟಾಪಿಕ್ ಬಂತು
ಸಮಾಚರ ಹೊಸದಲ್ಲ ಎಂದು ಚರ್ಚೆಲಿ ಬಂದ
ನಮ್ಮೂರ ಬೆರಣಿ ಕಥೆ ಕೇಳಿರೆಲ್ಲ

ದೇಶಿ ಬೀರ್‌ಬಲ್ ಅಕ್ಬರ್ ದರ್ಬಾರ್‌ನಲ್ಲೀ
ವಿಶೇಷ ಸ್ತಾನ ಗಳಿಸಿದ್ದದನು ಕಂಡು
ಅಸೂಯೆ ಪಡುವ ಪಂಡಿತರು ಸಂಚು ಹಾಕವನ
ನಾಶಮಾಡಲು ಯತ್ನಿಸುತ್ತಿದ್ದರು

ಊರಿಗೆಲ್ಲ ಬೀರ್ಬಲ್ಗೆ ಔಟ್ ಸೋರ್ಸ್ ಮೇಲಿದ್ದ
ವಿರೋಧ ತಿಳಿದಿತ್ತು ಪಂಡಿತರಿಗವಕಾಶ
ದೊರೆತಾಗ ಸಭೆಯಲಿದರ ಪ್ರಶ್ನೆ ಎತ್ತಿದರು
ದೊರೆ ನಮಗೆ ಐ.ಟಿ. ತಪ್ಪೆನಿಸುವುದಿಲ್ಲ

ಬೀರಬಲ್ ಹೇಳು ಹೂವೊಡನೆ ನಾರು ಶಿರವನು
ಸೇರುವುದೆನುವರು ವೆಸ್ಟರನ ಉಚ್ಚ ಐ.ಟಿ
ಸೇರಿ ನಮ್ಮ ಕೀಳ್ಮಟ್ಟದ ಸೊಸೈಟಿಯೂ ಸಹ
ಏರದೇಕೆ ಉತ್ತಮ ಶಿಖರವನು

ಉತ್ತರಕೊಡದ ಬೀರ್‌ಬಲ್ ನೋಡಿ ಅಕ್ಬರನು
ಕತ್ತೆತ್ತುಲಿದನು ನಾಳೆವರೆಗೆ ಅವದಿಯ
ಇತ್ತಿರುವೆನು ಯೋಚಿಸು ಅಗಲೂ ನಿನ್ನಲ್ಲಿ
ಉತ್ತರ ವಿರದಿರೆ ಸೋತೆನೆಂದನ್ನು

ಮುಂದಿನ ದಿನ ಎಲ್ಲರು ಕಾತರಿಸಿ ಕುಳಿತರು
ಇಂದಿವನ ಸೋಲು ಖಂಡಿತವೆಂದು ತಿಳಿದು
ವಂದಿಸಿ ದೊರೆಗೆ ಸುತ್ತಲೂ ನೋಡಿ ನಗುನಗುತ
ಅಂದನು ಶಿರಕೇರುವುದು ಹೆಚ್ಚಲ್ಲ

ನಮ್ಮಲ್ಲೆ ಕಲ್ತು ನಮಗೆ ಮಾರುವ ವಿದ್ಯಯಲಿ
ಸಮರಿಲ್ಲ ವೆಸ್ಟರನರಿಗೆ ಚಿಣಿಯರುಳಿದು
ನಮ್ಮ ಹಿಂದಿನವರು ಕಲಿಸಿದ ಬಾಳಿನ ಬಗೆಯ
ತಮ್ಮದೆಂದು ಪೇಟೆಂಟ್ ಮಾಡುವರು

ಸೋತೆನೆನೆ ಕೇಳು ತಾತರಾಯನ ಕಾಲದಾ
ಮೀತೇನ್‌ಟೆಕ್‌ನ ಅವರು ಕದ್ದ ಕಥೆಯಿದು
ಹಿತಕಾರ್ಯದಲಿ ಲಜ್ಜೆತೊರೆದ ಹಸು ಹಿಕ್ಕೆಯಿಡೆ
ಎತ್ತಿ ತುಂಬುವರು ಬುಟ್ಟಿಗೆ ಗೋಪರು

ಗೋದೂಳಿ ಲಗ್ನದಲಿ ಹಟ್ಟಿಗೆ ತರುವರದನು
ಎದ್ದು ನಿತ್ಯ ಕ್ರಿಯೆಗಳ ಮುಗಿಸಿ ಮರುದಿನ
ಮುದ್ದೆಯಂ ಮಾಡಿ ಸಗಣಿಯ ತಟ್ಟಿ ಗುಂಡಾಗಿ
ಮುದದಿ ಮೆತ್ತುವರು ಗೋಡೆಗಳಮೇಲೆ

ಬಿಸಿಲೇರುತಿರುವಂತೆ ಬಾನ ಬಟ್ಟಿಯ ಹಬೆಗೆ
ಹಸಿಹಾರಿ ಒಣಗುವುದು ರೊಟ್ಟಿಯೆಂತೆ
ಕುಸುಬಿದನು ಜೋಡಿಸುವರು ಬುಟ್ಟಿಯಲಿ ಮಾರಲು
ಕುಶಲತೆಯಲಿ ಶಿರದ ಮೇಲೆ ಹೊತ್ತು

ಆಟ್ಟದಲದನು ನಿಲುಕುವಂತಿಟ್ಟು ಕೊಂಡವರು
ಒಟ್ಟುವರು ಹಸಿಸೌದೆಯೊಡನೆ ಬೆರಣಿಯೆಂದು
ತಟ್ಟನೇ ಉರಿಹತ್ತಿ ಊದುವ ಕೊಳವಿ ಗಾಳಿಗೆ
ಸುಟ್ಟಿ ಹೋಗುವುದದು ಕರ್ಪೂರದಂತೆ

ವೆಸ್ಟರನರು ತಕ್ಷಶಿಲೆಲಿ ಸಗಣಿಟೆಕ್ ಕಲ್ತು
ವೇಸ್ಟ್ ತುಂಬಿ ಪಲ್ಯೂಶನ್ ಹರಡಿದಾಗ
ಟ್ರೀಟ್ಮ್‌ಮೆನ್ಟ್ ಪ್ಲಾಂಟ್ಸ್ ಕಟ್ಟಿ ಹೀಟ್‌ಗೆಲ್ಲಾ
ರೋಸ್ಟ್ ಆದಾಗ ಮೆನ್ಯುರ್ ಎಂದರು

ಮಾರಾಟಕೆ ಕೆಳಗಿನುಗ್ರಾಣದಲಿ ತುಂಬಿಟ್ಟ
ಸರಕಿಗೆ ಅಲೆ ನೀರ್ಹಾರಿ ತಗುಲಿ ಮೀತೇನ್
ಹರಿದು ರಾತ್ರಿಲಿ ಗೂರ್ಕ ದೀಪ ಹಚ್ಚಿದಾಕ್ಷಣ
ಉರಿಹತ್ತಿ ಹಡಗು ಸುಡುತಿದ್ದವಂತೆ

ಕೆಲಕಾಲ ಸಂಶೋಧನೆಲಿ ಸ್ಥಿತಿ ತಿಳಿದಾಗ
ಬಲು ಬುದ್ಧಿ ಇಮಿಗ್ರೆಂಟ್ ಎಂಜೀನೀರ್
ಸುಲುಬದ ಸ್ಟೋವ್ ಹೈ ಇನ್ ಟ್ರಾ‌ನ್ಸಿಟ್ ಅಂತ
ಸಲ್ಯುಷನ್ನ ತೋರಿಸಿಕೊಟ್ಟನಂತೆ

ಅಯ್ಯಾ ದೊರೆ ವೆಸ್ಟರನರು ಲೇಜಿ ಬಮ್ಗಳೂ
ವೈಯ್ಯಾರದ ಸ್ಲೋಗನೆಲ್ಲಕೂ ಬೇಕು
ಆಯ್ತು ಅಕ್ರೊನಿಮ್ಮಿಂದ ಸಗಣಿ ಟೆಕ್ ಎಸ್.ಎಚ್.ಐ.ಟಿ.
ದಯವಿಟ್ಟು ಒರಿಜನಲ್ ಸೋರ್ಸ್ ನೋಡು

ಅಕ್ಬರ್ ಒಪ್ಪಿ ಔಟ್ ಸೋರ್ಸ್ ರದ್ದುಮಾಡಿದನಂತೆ