ಅಮೆರಿಕನ್ನಡ
Amerikannada
ವಿಶ್ವ ದೇಗುಲ
ಡಾ. ನಾಗಭೂಷಣ ಮೂಲ್ಕಿ
ವಿಶ್ವ ದೇಗುಲದಿಂದ
ದೇವ ಸಂದೇಶವ ತಂದ
ಶ್ರಿಗುರುವಿನ ವಿಶ್ವಗುರು
ವಿವೇಕವನು ಜಾಗ್ರತಿಸಿದ
  ಭಾರತೀಯನು ನೀನು
  ನೀನೇ.. ವಿವೇಕಾನಂದ!!

ಅಂಧ ಕಂದಾಚಾರದಲ್ಲಿ
  ಹಲವು ಕಂದರಗಳಲ್ಲಿ
  ಉಚ್ಹ ನೀಚ ತಾನು ನೀನೆಂದು
ಹಳಿದು ಅಳಿಯುತಿರೆ
ವಿದೇಶ ದೇಶ ದೇಶಗಳಿಗೆ
  ತಂದೆ ದಿವ್ಯ ಸಂದೇಶ

ಈ ವಿಶ್ವ ಮಾನವ
  ಜನ ಜನಾಂಗ ಒಂದೇ
  ಜನಾನುರಾಗ ವಂದೇ
ಬಡವ ಬಲ್ಲಿದರೆಲ್ಲರಿಗೂ
  ಓರ್ವನೇ ದೇವನೆಂದೆ 

  ನಿನ್ನ ನೀ ಅರಿತರೆ
  ನಿನ್ನಲ್ಲೇ ಬೆರೆತರೆ
  ಎಲ್ಲರಲೂ ನೀನಿರುವೆ
  ಎಲ್ಲದು ನಿನ್ನಲೆ ಇದೆ 

  ಭಾರತದ ಪ್ರಪಿತಾಮಹನೆ
  ದೇಹ ದಾಸ್ಯ ಆಲಸ್ಯ ಕಳೆದು
   ವಿರಮಿಸದೇ ಗುರಿ ಸಾಧನೆ
   ನೀಡಿದೆ ನೀ ಪ್ರಚೋದನೆ