ಅಮೆರಿಕನ್ನಡ
Amerikannada
ಜೇನ ನೀತಿ
ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೋರ್ನಿಯ
ಜೇನನುಡಿಯನಾಡು ಎಡೆಬಿಡದ ತೊಡಕಮಡಿಲಲಿ ಉಡುಗಿ
ಅನುಗಾಲ ಮಲನಾಡ ಮಳೆಯಂತೆ ಸುರಿವ ಕಹಿಯನುಣುವರಿಗೆ
ದೀನತನದ ಮುಕ್ತಿ ದಾರಿಯ ಬೆಳಕ ಬೀರ್ವ ಹಾಡಲಿ

ಜೇನಸವಿಯ ನೀಡು ಕುಂದುಕೊರತೆಯಿಂದ ಅಂಧರಾಗಿ
ಕೊನೆಯಿರದ ಆಸೆಯಸೆಳೆತದಿಂದ ತಮ್ಮನೇ ಮಾರಿ ಉಣುವರಿಗೆ
ಖಿನ್ನತೆಯಿರದ ಉನ್ನತ ಬಾಳುವೆಯ ಹಿರಿಮೆ ತೋರ್ವ ಹಾಡಲಿ

ಜೇನ ಗೂಢ ಮರ್ಮ ಬಿಡಿಸು ಉಣದೆ ಉಣಿಸದೆ ಕೂಡುವ ನಿಪುಣರಿಗೆ
ನಲಿಯುತ ಹಾಡಿ ಆಡಿ ಸವಿಸವಿಯುತ ಜೀವ ಕಣವ ಹರಡಿ
ಗಲಿಬಿಲಿಯ ಸಂತೆಯಲಿ ಸಂತನಂತಿರುವರ ಮಹಿಮೆ ಸಾರ್ವ ಹಾಡಲಿ