ಅಮೆರಿಕನ್ನಡ
Amerikannada
ವಿನಯದ ಪರಮಾವಧಿ
-ನಳಿನಿ ಮೈಯ್ಯ, ಅಮೆರಿಕಾ
ಕೊಡು ನನಗೀ ವರವ ದೇವ
ಹೇ ದೀನ ದಯಾಮಯ ಭಾವ

ಈ ಲೈನು ಹೊಡೆದೇ ಭಸ್ಮಾಸುರ ವರ ಪಡೆದದ್ದು
ವರ ಕೊಟ್ಟ ಶಿವನನ್ನೇ ಬೂದಿ ಮಾಡಲು ಹೋದದ್ದು

ಕೊಡು ನನಗೀ ವರವ ದೇವ...
ಇದೇ ಲೈನು ಹೊಡೆದು ರಾವಣ ಆತ್ಮಲಿಂಗ ಬೇಡಿದ್ದು

ಹಿರಣ್ಯ ಕಶಿಪುಗೂ ಗೊತ್ತು ಈ ಲೈನು
ದೇವರನ್ನೇ ಧಿಕ್ಕರಿಸಿದನಲ್ಲ ಅವನು

ಅಂದಿನಿಂದ ಇಂದಿನವರೆಗೂ ಈ ಲೈನು ಹೊಡೀತಾನೇ ಇದ್ದಾರೆ
ಕಟುಕರು, ಕೇಡಿಗಳು, ಉಗ್ರರು, ನರಹಂತಕರು
ರಾಜಕೀಯ ಧುರೀಣರು
ವರ ಕೊಟ್ಟಿದ್ದೇ ಕೊಟ್ಟಿದ್ದು ದೇವರು

“ಅತಿ ವಿನಯಂ ಧೂರ್ತ ಲಕ್ಷಣಂ”
ಅನ್ನೋ ಗಾದೆ ದೇವರಿಗೆ ಯಾರೂ ಹೇಳಿಕೊಟ್ಟಿಲ್ಲವೆ?