ಅಮೆರಿಕನ್ನಡ
Amerikannada
ಬೇಳೆ ಹೋಳಿಗೆ
-ಪುಷ್ಪಲತಾ ಮಲ್ಲಿಕಾರ್ಜುನ
ಬೇಕಾಗುವ ಸಾಮಗ್ರಿಗಳು:
ಅರಿಶಿಣ ಅರ್ಧ ಚಮಚ
ತೊಗರಿಬೇಳೆ ಒಂದು ಕಪ್
ಕಾಯಿತುರಿ ಎರಡು ಕಪ್
ಬೆಲ್ಲ ಎರಡು ಅಚ್ಚು
ಏಲಕ್ಕಿಪುಡಿ ಎರಡು ಚಮಚ
ಮೈದಾ ಒಂದು ಕಪ್
ಎಣ್ಣೆ ಅರ್ಧ ಕಪ್

ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ಮೈದಾ, ಎಣ್ಣೆ ಸ್ವಲ್ಪ ಅರಿಶಿನ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ (ಪೂರಿ ಹಿಟ್ಟಿನ ರೀತಿ) ಅದನ್ನು ಚೆನ್ನಾಗಿ ನಾದಿಕೊಳ್ಳಿ. ಎರಡು ಗಂಟೆ ನೆನೆಯಲು ಬಿಡಿ. ನಂತರ ಬೇಳೆಯನ್ನು ಚೆನ್ನಾಗಿ ಮೃದುವಾಗಿ ನೀರಾಕಿ ಸ್ವಲ್ಪ ಬೇಯಿಸಿಕೊಳ್ಳಿ (ಬೇರೆ ಪಾತ್ರೆಯಲ್ಲಿ) ಬೆಂದನಂತರ ಕಾಯಿತುರಿ ಬೆಲ್ಲ, ಏಲಕ್ಕಿಪುಡಿಯನ್ನು ಹಾಕಿ ಕುದಿಸಿಕೊಳ್ಳಿ, ಬೆರಸಿಕೊಳ್ಳಿ. ಆರಿದ ನಂತರ ನುಣ್ಣಗೆ ರುಬ್ಬಿ ಹೂರಣ ತಯಾರಿಸಿಕೊಳ್ಳಿ. ನಿಂಬೆಗಾತ್ರದ ಹೂರಣವನ್ನು ತೆಗೆದುಕೊಂಡು ಸ್ವಲ್ಪ ಕಡಿಮೆ ಹೂರಣವನ್ನು ತೆಗೆದುಕೊಂಡು ಕಲಸಿಟ್ಟ ಮೈದಾ ಕಣಕದಿಂದ ಸ್ವಲ್ಪ ಅಗಲಕ್ಕೆ ಲಟ್ಟಿಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಸೀಟ್ ಮೇಲೆ. ಅದರ ಮಧ್ಯೆ ಹೂರಣವಿರಿಸಿ. ಮತ್ತೆ ಗುಂಡನೆ ಆಕಾರಾ ಮಾಡಿ. ತಟ್ಟಿಕೊಳ್ಳಿ. ಎರಡೂ ಬದಿಯಲ್ಲೂ ಹೆಂಚಿನಲ್ಲಿ ಬೇಯಿಸಿಕೊಳ್ಳಿ. ಒಬ್ಬಟ್ಟು ರೆಡಿ.