ಅಮೆರಿಕನ್ನಡ
Amerikannada
ಮಾವಿನಕಾಯಿ ಚಿತ್ರಾನ್ನ
-ನಾಗಲಕ್ಷ್ಮೀ ಹರಿಹರೇಶ್ವರ
ಬೇಕಾಗಿರುವ ಸಾಮಗ್ರಿಗಳು:
ಒಂದು ಸೌಟು ಅಡುಗೆ ಎಣ್ಣೆ
ಒಂದು ಚಮಚ ಸಾಸಿವೆ
ಒಂದು ಚಮಚ ಉದ್ದಿನಬೇಳೆ
ಒಂದು ಚಮಚ ಕಡ್ಲೆಬೇಳೆ
ಒಂದು ಸೌಟು ಕಡ್ಲೆಕಾಯಿ ಬೀಜ
೧/೮ ಇಂಗು
೧/೨ ಚಮಚ ಅರಿಶಿನ
೪-೬ ಎಸಳು ಕರಿಬೇವಿನಸೊಪ್ಪು
೨ ಹಸಿಮೆಣಸಿನಕಾಯಿ

ಮಾಡುವ ವಿಧಾನ:
ಮೊದಲಿಗೆ ಆರು-ಎಂಟು ಗುಂಟೂರ್ ಮೆಣಸಿನಕಾಯಿ, ಒಂದು ಚಮಚ ಉದ್ದಿನಬೇಳೆ, ಒಂದು ಚಮಚ ಮೆಂತ್ಯ, ಒಂದು ಚಮಚ ಸಾಸಿವೆ ಎರಡು ಚಮಚ ಎಳ್ಳು ಇವಿಷ್ಟನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಒಂದು ಸೌಟು ಎಣ್ಣೆ ಹಾಕಿ, ಕಡ್ಲೆಬೇಳೆ, ಉದ್ದಿನಬೇಳೆ, ಕಡ್ಲೆಕಾಯಿ ಬೀಜ, ಇಂಗು, ಅರಿಶಿನ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಮಾವಿನ ತುರಿಯನ್ನು ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಮಾಡಿಟ್ಟುಕೊಂಡಿರುವ ಪುಡಿಯನ್ನು ಹಾಕಿ ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಮಿಶ್ರಣವನ್ನು ತಯಾರುಮಾಡಿಟ್ಟುಕೊಳ್ಳಿ. ಉದುರಾಗಿರುವ ಅನ್ನವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಕಲಸಿ. ಮಾವಿನಕಾಯಿ ಚಿತ್ರಾನ್ನ ರೆಡಿ. ಎಲ್ಲರೂ ಅಚ್ಚುಕಟ್ಟಾಗಿ ತಿಂದು ಸಂತೋಷಪಡಿ.