ಅಮೆರಿಕನ್ನಡ
Amerikannada
ಯುಗ ಯುಗ ಯುಗಗಳ
ಡಾ. ನಾಗಭೂಷಣ ಮೂಲ್ಕಿ, ಓಕ್ ಬ್ರೂಕ್, ಇಲಿನಾಯ್
ಯುಗ ಯುಗ ಯುಗಗಳ
ಯುಗಳ ಗೀತೆಯ ರೀತಿ
ಹಾಡುತಿರು ಆಲಿಸುತಿರು
ಈ ಯುಗಾದಿ ದಿನದಂದು ||ಯು||

ಕೈಗೂಡಿದ ಹಿರಿದಾಸೆಗಳು
ಕೈಹಿಡಿದು ನಡೆಸಲೆಂದು
ಈಡೇರದ ಮನದಾಸೆಗಳು
ಈಡೇರುವುದು ಇನ್ನು ಮುಂದು ||ಯು||

ಶುಭ ಹಾರೈಸುತಾ ಇನ್ದೆನ್ದೆಂದು
ಹೂಸ ಹೂಸ ಹೆಜ್ಜೆ ಹಾಕೋಣ
ತನುಮನ ಹುರಿದುಂಬಿಸೋಣ
ಈ ಯುಗಾದಿ ಆದಿ ಹಾದಿಯಲಿ ||ಯು||

ಚೈತ್ರ ನವ ವಸಂತ ಕಾಲದಲಿ
ಚೇತನಕೆ ಹೊಸ ಚೈತನ್ಯವು
ಈ ವರುಷವಿಡಿ ತುಂಬಿರಲಿ
ಜೀವಕೆ ಹರುಷ ತರುತಿರಲಿ ||ಯು||