ಅಮೆರಿಕನ್ನಡ
Amerikannada
ಅಮೆರಿಕನ್ನಡ ಸಹೃದಯರಿಗೆ ನಂದನ ಸಂವತ್ಸರದ ಶುಭಾಶಯಗಳು
-ನಾಗಲಕ್ಷ್ಮೀ ಹರಿಹರೇಶ್ವರ, ಸಂಪಾದಕರು
ಖರ ಕಳೆದು ನಂದನ ಬಂದಿದೆ
ಆನಂದ ತುಂಬಿದೆ
ಹೊಸ ವರುಷ ಹೊಸತು ಹೊಸತು ತರುತಿದೆ
ಮನೆ-ಮನದ ಅಂಗಳದಿ ನಲಿವು ಚೆಲುವು ತುಂಬಿದೆ

ಆತ್ಮೀಯ ಕನ್ನಡ ಬಂಧುಗಳೆ, ಈ ಸಾಹಿತ್ಯ ಜಾಲತಾಣ ಶುರುವಾಗಿ ಒಂದು ವರ್ಷವಾಯಿತು. ನಿಮ್ಮೆಲ್ಲರ ಬೆಂಬಲಕ್ಕೆ ಸಹಕಾರಕ್ಕೆ ನಾನು ಕೃತಜ್ಞಳು. ಇದು ಈಗ ಅಂಬೆಗಾಲಿಟ್ಟು ನಿಲ್ಲಲು ಶುರುಮಾಡಿದೆ. ನೀವೆಲ್ಲರೂ ಹೇಗೆ ನಿಮ್ಮ ಮಕ್ಕಳನ್ನು ಬೆಳೆಸಿ, ಪೋಷಿಸಿದರೋ ಅದೇ ರೀತಿ ಈ ಸಾಹಿತ್ಯ ಜಾಲತಾಣವನ್ನು ಪೋಷಿಸಿ. ನಿಮಗೆ ತಿಳಿದಿರುವ ಕನ್ನಡ ಬಂಧುಗಳಿಗೆ ಈ ಜಾಲತಾಣವನ್ನು ಸಂಪರ್ಕಿಸಲು ತಿಳಿಸಿ. ಹಾಗೆನೆ ನಿಮ್ಮ ಅಮೂಲ್ಯ ಬರೆಹಗಳನ್ನು ಕಳಿಸಿಕೊಡಿ. ಇದು ನಿಮ್ಮದೇ ಜಾಲತಾಣ. ಈ ಜಾಲತಾಣವನ್ನು ಬೆಳಸುವ ಕಾರ್ಯ ನಿಮ್ಮದು. ಹರಿಹರೇಶ್ವರರ ಈ ಕನಸಿನ ಕೂಸನ್ನು ಬೆಳಸಿ, ಬೆಳಗಿಸಿ ಎಂದು ಕೇಳಿಕೊಳ್ಳುವೆ.