ಅಮೆರಿಕನ್ನಡ
Amerikannada
ಹುಟ್ಟಿದರೆ ಫಲವೇನು
ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೇಲ್, ಕ್ಯಾಲಿಫೋರ್ನಿಯ.
ಹುಟ್ಟಿದರೆ ಫಲವೇನು
ಉತ್ತಮಗುಣಗಳನು ಮರೆತು
ಮನುಕುಲದಿ ಉತ್ತಮರು
ಮುಗಿಲೆತ್ತರಕ್ಕೂ ಇಹರು

ಇರುವಷ್ಟು ದಿನನೀನು
ಉತ್ತಮೋತ್ತಮನಾಗು
ಮುಂಬರುವ ಜನುಮಗಳು
ಉತ್ತಮ ಸರಮಾಲೆಗಳು

ನಾಂದಿಯು ಸದ್ಗತಿಯ
ಹೊಂದುವ ಮಾರ್ಗಕಿದು
ಅರಿತು ನಡೆದಂತವರು
ಅಮರಚರಿತೆ ರಚಿಸುವರು

ಅಮರವಾದ ಚರಿತೆಯನು
ಮುಂಬರುವ ಮನುಕುಲವ
ಉತ್ತಮರ ಮಾಡುವುದು
ಅಮರರನು ಸ್ಮರಿಸುತ್ತ