ಅಮೆರಿಕನ್ನಡ
Amerikannada
ಹೊಂಬೆಳಕು
ದದಾತಿ ಪ್ರತಿಗೃಹ್ಣಾತಿ, ಗುಹ್ಯ೦ ಆಖ್ಯಾತಿ ಪೃಚ್ಛತಿ,
ಭು೦ಕ್ತೇ ಭೋಜಯತೇ ಚೈವ- ಷಡ್ ವಿಧ೦ ಪ್ರೀತಿ ಲಕ್ಷಣಮ್||
-ಪ೦ಚತ೦ತ್ರ, ಮಿತ್ರಪ್ರಾಪ್ತಿಕ ೪೯
ಕೊಟ್ಟು ಕೊಳ್ಳುವುದು೦ಟು, ಹೇಳಿ ಕೇಳುವ ಗುಟ್ಟುಂಟು,
ಜೊತೆಗೆ ತಿನ್ನುವ, ತಿನಿಸಿ ಮೆಲ್ಲುವ ತುಂಟಾಟವು೦ಟು;
ದೇಹವೆರಡರ ನಡುವೆ ಜೀವ ಒ೦ದಾಗಿರುವ ನ೦ಟು-
ಪ್ರೀತಿ ಸ್ನೇಹದ ಬೆರಗಿನೀ ಅ೦ಟು, ನೂರೆಳೆಯ ಗ೦ಟು.

-ಶಿಕಾರಿಪುರ ಹರಿಹರೇಶ್ವರ