ಅಮೆರಿಕನ್ನಡ
Amerikannada
ಅಂತ
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ತಾಳಮೇಳಗಳು ಮುಗಿದರೂ,
ಗಾನದಿಂಪು ಸುಳಿಯುವಂತೆ;
ರಾಗಸ್ವರಗಳು ನಿಂತಮೇಲೂ,
ಪದಗಳರ್ಥ ಉಳಿಯುವಂತೆ;
ಶಬ್ದವಾಕ್ಯಗಳಳಿದಮೇಲೂ,
ಮೌನವೇ ಮಾತಾಡುವಂತೆ;
ಜೀವ ದೇಹವನಗಲಿದ ಮೇಲೆ,
ನೆನಪಿನ ಸುರುಳಿ ತೆರೆಯುತಿರಲು,
‘ಇಲ್ಲ’ವೆಂಬ ಕೊರತೆಯನ್ನು,
ಮಧುರ ಸ್ಮರಣೆ ತುಂಬಲಿ;
ನೆನಪಿನೇಣಿಯ ಹಂತಹಂತದಲಿ,
ಅಂತವೆಂಬುದನಂತವಾಗಲಿ