ಅಮೆರಿಕನ್ನಡ
Amerikannada
ಹೊಂಬೆಳಕು
ಅತಿದಾನೇ ಬಲಿರ್ ಬದ್ಧೋ, ಅತಿಮಾನೇ ಚ ಕೌರವಾಃ|
ಅತಿರೂಪೇ ಹೃತಾ ಸೀತಾ, ಅತಿ ಸರ್ವತ್ರ ವರ್ಜಯೇತ್||
-ವಾಲ್ಮೀಕಿ ರಾಮಾಯಣ, ಅರಣ್ಯಕಾ೦ಡ, ೩:೩೭:೨
ತುಳಿತಕ್ಕೆ ಒಳಗಾದವನಾರು? ಅತಿದಾನಿ ಆ ಬಲಿ ತಾನೇ;
ಕಡು ಹೆಮ್ಮೆ ಮುಳುವಾಯ್ತು ಮಾನಧನ ಕೌರವನಿಗೇನೇ;
ಬಲು ರೂಪವತಿಯೆಂದೇ ಬಯಸಿ ರಾವಣ ಸೀತೆಯನೊಯ್ದ-
ಬೇಡ ಎಲ್ಲೂ ಅತಿ, ಹಿಡಿ ನಡುವಣ ಚಿನ್ನದ ಹಾದಿಯನ್ನೇ!

-ಶಿಕಾರಿಪುರ ಹರಿಹರೇಶ್ವರ