ಅಮೆರಿಕನ್ನಡ
Amerikannada
ಜಿ.ಟಿ.ಎನ್. ಒಂದು ಶಕ್ತಿ
-ರಂಗಧಾಮಯ್ಯ
ಕಾರ್ಯದರ್ಶಿ, ಕನ್ನಡ ಸಹೃದಯ ಬಳಗ, ಸಿಎಫ್‌ಟಿಆರ್‌ಐ, ಮೈಸೂರು

ಜಿ.ಟಿ.ಎನ್. ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ!
ಬಲ್ಲವರಿಗೆಲ್ಲ ಬೆಲ್ಲವಾಗಿ ಹತ್ತಿರವಾದವರು
ಕಲ್ಲುಸಕ್ಕರೆಯಾಗಿ ಎಲ್ಲರಿಗೂ ಬೇಕಾದವರು
ನಮ್ಮ ಒಳ ಹೊರಗಿನ ಶುದ್ಧಿಗೆ ಕಾರಣವಾದವರು!

ಸಾಹಿತ್ಯ, ಸಂಗೀತ ವಿಜ್ಞಾನ ವಲ್ಲರಿಯ
ವಿಲಾಸ ವಿಮಲ ವಿಭೂಷಣ!
ವಿದ್ವೇಷವಳಿದ ವಿದ್ಯಾಧರ ವಿಧಾತ!
ವಿನಯ ವಿನೂತನ ವಿಪುಲ ವಿಬೋಧ!

ಕಾಠಿಣ್ಯವರಿಯದ ಕನ್ನಡದ ಕೆಂಗದಿರ ಸೂರ್ಯ!
ಕಳಂಕವಿಲ್ಲದ ಕಾರಣಿಕ ಕಾಂಚನ ಕಳಾಧರ!
ಆದರ ಆದರ್ಶ ಸನ್ನಡತೆಯ ಆಚಾರ್ಯ!
ಆನಂದ ಅಶೋಕ ಅಧಿಕ್ಯದ ಅನಂತ ವರ್ಧಮಾನ!

ಜಿ.ಟಿ.ಎನ್. ಹೆಸರೆ ಕೇಳಿಸಲಿ ನನ್ನ ಕಿವಿಗೆ
ವೀಣಾವಾಣಿಯಿಂಪೆನಗೆ ಅನವರತ!
ಜಿ.ಟಿ.ಎನ್. ಕಾಯ ಕಾಣಿಸಲಿ ನನ್ನ ಕಣ್ಗೆ
ಅಂತರಾತ್ಮದ ಅನಂಗ ಅನಸೂಯ ಅನುದಿನ!