ಅಮೆರಿಕನ್ನಡ
Amerikannada
ಧರೆಯು ಧನ್ಯ
ಕೆ. ವೆಂಕಟಪ್ಪ ಐತಾಂಡಹಳ್ಳಿ, ಪಾಂಡೆಲ್, ಕ್ಯಾಲಿಫೋರ್ನಿಯ
ಎಷ್ಟು ಜನರಭಿಮಾನ
ಆದರಗಳು ನಿನ್ನನ್ನ
ಇಷ್ಟರವನ ಮಾಡಿರುವ
ಆಶೀರ್ವಾದಗಳು ಚಿನ್ನ

ಚಿನ್ನನೀ ಭುವಿಯಲ್ಲಿ
ಇರುವಷ್ಟು ದಿನ ನಿನ್ನ
ಕೀರ್ತಿ ಬೆಳಗುತಲಿರಲಿ
ಇದಕೆ ಮಿಗಿಲೇನಿಲ್ಲ

ಪ್ರಕೃತಿಯು ನಲಿಯುವುದು
ನಿನ್ನ ಪ್ರಗತಿಯ ಕಂಡು
ಕಂಡರಿಯದನುಭವವು
ಧರೆಗೆ ಲಭ್ಯವಾಗುವುದು

ಧರೆಯು ಧನ್ಯವಾಗುವುದು
ಆಶೀರ್ವಚನವಿತ್ತು
ನಿನಕೀರ್ತಿ ಹಗಲಿರುಳು
ಸ್ಥಿರವಾಗಿ ಇರಲೆಂದು