ಅಮೆರಿಕನ್ನಡ
Amerikannada
ನೀವೇನು ಬೇರೆ ಕಂಡಿರಿ?
ಡಾ. ಕೆ.ಆರ್.ಎಸ್. ಮೂರ್ತಿ, ಅಮೆರಿಕಾ ಇಷ್ಟ ದೇವರಿಗೆ ಈಡುಗಾಯಿ ನೂರೆಂಟು ಒಡೆದಾಯಿತು
ಕಷ್ಟ ಬಂದಾಗ ವೆಂಕಟರಮಣಾ ಎನುತ್ತಾ ಕೂಗಾಯಿತು

ಮಂಗಳಾಂಗನ ಮೂತಿಗೆ ಮಂಗಳಾರತಿ ಬೆಳಗಾಯಿತು
ಗಂಗಾ ನದಿಯಲ್ಲಿ ಮುಳುಗಿ ಲಿಂಗಾರ್ಚನೆ ಸಾಂಗವಾಯಿತು

ಇನ್ನೂ ಏಕೋ ನನ್ನ ಆಸೆಗಳೆಲ್ಲಾ ಈಡೇರಿಲ್ಲಾ ಗೊತ್ತಾಗಿಲ್ಲ
ಏನು ದೇವರೇ ಕಾಕ-ತಾಳೀಯ ವಾದವು ನಿನಗರಿವಾಗಿಲ್ಲವಲ್ಲ

ಜಾತಕದಲ್ಲಿ ಏನೆಲ್ಲಾ ವೈಭವಗಳು ನನಗೆ ಲಭ್ಯವೆಂದು ಬರೆದಿದೆ
ಚಾತಕ ಪಕ್ಷಿಗಿಂತಾ ಆತಂಕ ಅತಿರೇಕ ನನ್ನದೆಂದು ಗೊತ್ತೇ ಇದೆ

ವಿಭೂತಿ, ನಾಮಗಳು ಮೂರು, ಮೈಯೆಲ್ಲಾ ಮುದ್ರೆ, ಲಿಂಗಧಾರಣೆ
ಅಭೂತ ಪೂರ್ವವೋ ಎಂಬಂತೆ ಎಲ್ಲಾ ದೇವರಿಗೂ ಆಯಿತು ಪಾರಣೆ

ಅಲ್ಲಾ ಎಂದು ಊರಿಗೆಲ್ಲಾ ಕೇಳುವ ಹಾಗೆ ಕೂಗಿಲ್ಲ; ಕುರಿ ಕಡಿಯಲಿಲ್ಲ
ಸಲ್ಲದ ಗುರುವೆಂದು ಶಿಲುಬೆಗೆ ಕಾಲೂರಿ ಎಸುವನು ತುಸೂ ನೆನಸಿಲ್ಲ

ಯಾರಿರ ಬಹುದು ಅತಿ ಮೂಢರು: ನಂಬಿದವರು ನಾನೂ ಮತ್ತು ನೀವೂ?
ಸರಿಯಾದ ಉತ್ತರ, ಪರಿಹಾರಗಳ ಬೇರೆ ಏನಾದರೂ ಕಂಡಿರಾ ತಾವೂ?