ಅಮೆರಿಕನ್ನಡ
Amerikannada
ಹೊಂಬೆಳಕು
ಲಕ್ಷ್ಮೀರ್ ದಾನಫಲಾ, ಶ್ರುತ೦ ಶಮಫಲ೦,
ಪಾಣಿಃ ಸುರಾರ್ಚಾ ಫಲಶ್,
ಚೇಷ್ಠಾ ಧರ್ಮಫಲಾ, ಪರಾರ್ತಿ-ಹರಣ-
ಕ್ರೀಡಾಫಲ೦ ಜೀವಿತ೦|
ವಾಣೀ ಸತ್ಯಫಲಾ, ಜಗತ್ ಸುಖಫಲ-
ಸ್ಪೀತಾ ಪ್ರಭಾವೋ ಉನ್ನತಿರ್
ಭವ್ಯಾನಾ೦, ಭವ ಶಾ೦ತಿ ಚಿ೦ತನ ಫಲ
ಭೂತ್ಯೈರ್ ಭವತಿ ಏವ ಧೀಃ ||
-ಕ್ಷೇಮೇಂದ್ರ, ಚತುರ್‌ವರ್ಗ ಸ೦ಗ್ರಹ
ಸಿರಿ ಇರುವುದೇತಕ್ಕೆ? ಕೈ ಬಿಚ್ಚಿ ಕೊಟ್ಟು ಹಂಚಲಿಕೆ;
ಓದು ಬರಹದ ಗುರಿ ಕೂಡ ನೆಮ್ಮದಿಯದೇ ಗಳಿಕೆ;
ಕೈಗಳಿಹವೇತಕ್ಕೆ? ದೀನರ ಸೇವೆ, ದೇವರಾರಾಧನೆಗೆ;
ತುಂಬಿ ತುಳುಕಲಿ ದುಡಿಮೆ ಹಣ್ಣಾಗಿ ಪುಣ್ಯದ ಕುಡಿಕೆ;
ಪರರ ನೋವ ಪರಿಹರಿಸುವ ಆಟವಾಗಿರಬೇಕೀ ಬಾಳು;
ಬೇಕು, ಆಡಿದರೆ ನಿಜ ನುಡಿವ ಎದೆಗಾರಿಕೆಯ ಬಯಕೆ;
ಮೇಲೆ ಏರಿದೆ, ಲೋಕಹಿತಕಾಗಿ ದುಡಿ, ಪಡೆ ಹೆಗ್ಗಳಿಕೆ;
ತಿಳಿವು ಮೂಡಿತೋ ಹುಡುಕು, ಹತ್ತು ಹಿಂತಿರುಗದಾ ನೌಕೆ!

-ಶಿಕಾರಿಪುರ ಹರಿಹರೇಶ್ವರ