ಅಮೆರಿಕನ್ನಡ
Amerikannada
ಹೊಂಬೆಳಕು
ಮ೦ತ್ರೇ ತೀರ್ಥೇ ದ್ವಿಜೇ ದೈವೇ, ದೈವಜ್ಞೇ ಭೇಷಜೇ ಗುರೌ
ಯಾದೃಶೀ ಭಾವನಾ ಕುರ್ಯಾತ್, ಸಿದ್ಧಿರ್ ಭವತಿ ತಾದೃಶೀ||
-ಪ೦ಚತ೦ತ್ರದ ಕೊನೆಯ ಪದ್ಯ (೫:೯೭)
ಮ೦ತ್ರದಲಿ, ತೀರ್ಥದಲಿ, ವೈದ್ಯರಲಿ, ಗಣಕರಲಿ,
ತಿಳಿದವರು ಅವರೆ೦ದು ಶರಣಾದ ಗುರುಗಳಲಿ,
ನೀನಲ್ಲದಿನ್ನಾರು ಪೊರೆವರಿಹರೆನೆ ಆ ದೇವರಲಿ-
ಎಷ್ಟೆಷ್ಟು ನ೦ಬಿಕೆಯೋ ಫಲಿಸೀತು ಸಿದ್ಧಿ ಅಷ್ಟಷ್ಟು!

-ಶಿಕಾರಿಪುರ ಹರಿಹರೇಶ್ವರ