ಅಮೆರಿಕನ್ನಡ
Amerikannada
ಮೈಸೂರು ದಸರಾ
-ನಗರ್ಲೆ ಶಿವಕುಮಾರ್, ಮೈಸೂರು
ಮೈಸೂರು ದಸರಾಕ್ಕೆ ತಪ್ಪದೇ ಬನ್ನಿ
ಕನ್ನಡಿಗರ ಹಬ್ಬಕ್ಕೆ ಮೆರುಗು ತನ್ನಿ

ನಾಡದೇವತೆ ಚಾಮುಂಡೇಶ್ವರಿಯ ದರುಶನಕೆ
ಅರಸರಾಳಿದ ಅರಮನೆ ವೈಭವದ ವೀಕ್ಷಣೆಗೆ

ಕರ್ನಾಟಕದ ಒಡೆಯರ ರಾಜಮನೆತನಕ್ಕೆ
ಕೊನೆಯ ರಾಜರಾಳ್ವಿಕೆಗೆ ಯದುವಂಶವೆನ್ನಿ

ಕಾವೇರಿ ಕಪಿಲ ಹರಿಯುವ ಬಯಲು ಇದು
ಮಹಿಷಾಸುರನ ಮರ್ಧಿಸಿದ ಸೀಮೆ ಇದು

ಒಂಬತ್ತು ದಿನಗಳ ವಿಜಯದಶಮಿ ಇದು
ಕರುನಾಡು ಭುವನೇಶ್ವರಿಗೆ ನಾಡಹಬ್ಬವಿದು

ಸಾಂಸ್ಕೃತಿಕ ನಗರಿಯ ಕನ್ನಂಬಾಡಿ ನೋಡಿ
ಚಾಮುಂಡಿ ಬೆಟ್ಟ ಮೃಗಾಲಯ- ಬನ್ನಿ ನೋಡಿ

ಕನ್ನಡ ಜಾನಪದ ಕಲೆಗಳ ಗತವೈಭವ ಬಿಂಬಿಸುವುದು
ಆನೆ ಮೇಲಿನ ಅಂಬಾರಿ ಮೆರವಣಿಗೆಯ ದಸರಾವಿದು

ಭಾರತ ದೇಶದಲ್ಲೇ ವಿಶಿಷ್ಟ ನೋಟದ ಹಬ್ಬವಿದು
ವಿಶ್ವವಿಖ್ಯಾತಿ ಪಡೆದ ಮೈಸೂರು ದಸರಾವಿದು