ಅಮೆರಿಕನ್ನಡ
Amerikannada
ಬಿ.ಎಸ್. ದೊರೆಸ್ವಾಮಿ ರವರು ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಜೆ.ಪಿ.ನಗರ ಶಾಖೆ, ಮೈಸೂರು ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಯೋಗ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ ೫:೩೦ ರಿಂದ ೭:೩೦ ರ ವರೆಗೆ ನಿಸ್ವಾರ್ಥವಾಗಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಜೆ.ಪಿ.ನಗರ ಮತ್ತು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಡುತ್ತಿದ್ದಾರೆ. ಇವರು ಪ್ರಸ್ತುತ ಚೈನ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಿಡುವಿನ ಸಮಯದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಯೋಗ ಮತ್ತು ಪ್ರಾಣಾಯಾಮಕ್ಕೆ ಸಂಬಂಧಿಸಿದ ಏನಾದರೂ ಸಂದೇಹಗಳಿದ್ದಲ್ಲಿ ಅವರ ಈ ಮೊಬೈಲ್ ನಂಬರ್ಗೆ ಸಂಪರ್ಕಿಸಬಹುದು. ಮೊಬೈಲ್ ನಂ. ೯೯೪೫೨-೫೯೩೯೭